ನವದೆಹಲಿ: ಭಾರತದಲ್ಲಿ ಉತ್ಪಾದನೆಯಾದ ಕೋವಿಡ್ ಲಸಿಕೆಗಳ ಸರಕು ದ್ವೀಪ ರಾಷ್ಟ್ರವಾದ ಮಾಲ್ಡೀವ್ಸ್ ಮತ್ತು ಹಿಮಾಲಯ ರಾಷ್ಟ್ರವಾದ ಭೂತಾನ್ ಅನ್ನು ಬುಧವಾರ ತಲುಪಿದೆ.
ಈ ಕುರಿತಂತೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಟ್ವೀಟ್ ಮಾಡಿದ್ದು, ಭಾರತದಲ್ಲಿ ಉತ್ಪಾದನೆಗೊಂಡ ಎರಡು ಲಸಿಕೆಗಳು ಮಾಲ್ಡೀವ್ಸ್ ತಲುಪಿರುವುದು ಎರಡೂ ದೇಶಗಳ ನಡುವೆ ಸ್ನೇಹ ಬಾಂಧವ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ ಜೈಶಂಕರ್ ಅವರು, ಭೂತಾನ್‍ಗೆ ಲಸಿಕೆ ಪೂರೈಸಿರುವುದು ಭಾರತದ ನೆರೆಹೊರೆಯ ಮೊದಲು ನೀತಿಗೆ ಮತ್ತೊಂದು ಉದಾಹರಣೆ ಎಂದು ಹೇಳಿದ್ದಾರೆ.