ತಿರುವನಂತಪುರ: ತಿರುವನಂತಪುರದ ವಿಮಾನ ನಿಲ್ದಾಣ ಅಭಿವೃದ್ಧಿಯಲ್ಲಿ ಖಾಸಗಿ ಸಹಭಾಗಿತ್ವವನ್ನು ಕೋರಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಹೇಳಿರುವುದೆಲ್ಲ ನೈಜತೆಗೆ ವಿರುದ್ದವಾದುದು ಎಂದು ಕೇಂದ್ರ ಸಂಸದೀಯ ಮತ್ತು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ ಮುರಲೀಧರನ್ ಟೀಕೆ ವ್ಯಕ್ತಪಡಿಸಿದ್ದಾರೆ. ಸಿಎಂ ಹರಾಜಿನಲ್ಲಿ ಭಾಗವಹಿಸಿದ ಬಳಿಕ ಈ ರೀತಿಯ ಹೇಳಿಕೆ ನೀಡಿರುವುದು ವಿಲಕ್ಷಣ ವಾದ ಎಂದು ವಿ.ಮುರಲೀಧರನ್ ಟೀಕೆ ವ್ಯಕ್ತಪಡಿಸಿರುವರು.
ಹರಾಜಿನ ಸಂದರ್ಭ ರಾಜ್ಯ ಸರ್ಕಾರವು ಕಂಪನಿಗಿಂತ ಹೆಚ್ಚಿನ ಹಣವನ್ನು ತೋರಿಸಿದ್ದರಿಂದ ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್‍ಗೆ ಹಸ್ತಾಂತರಿಸಲಾಯಿತು. ಅದಾನಿ ಗ್ರೂಪ್‍ನ ಬಿಡ್ ಮೌಲ್ಯ 168 ಕೋಟಿ ರೂ.ಆಗಿತ್ತು. ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮವು 135 ಕೋಟಿ ರೂ.ಬಿಡ್ ಸಲ್ಲಿಸಿತ್ತು. ಸಂಪೂರ್ಣ ಪಾರದರ್ಶಕ ರೀತಿಯಲ್ಲಿ ಹರಾಜು ನಡೆಸಲಾಗಿದೆ ಎಂದು ಮುರಲೀಧರನ್ ಹೇಳಿದರು.
ಇದಕ್ಕೂ ಮೊದಲು ಬಿಡ್ ನಲ್ಲಿ ಪಾಲ್ಗೊಂಡ ಸರ್ಕಾರಿ ಪ್ರಾಯೋಜಿತ ಕಂಪೆನಿಯ ಉಮೇದ್ವಾರಿಕೆಯನ್ನು ತಯಾರಿಸಿರುವುದು ಅದಾನಿ ಕಂಪೆನಿಯೊಂದಿಗೆ ಹೆಚ್ಚು ಸಂಬಂಧಗಳಿರುವ ಏಜೆನ್ಸಿಯೊಂದರೊಂದಿಗೆ ಎಂಬ ಆರೋಪಗಳು ಈ ಹಿಂದೆ ಕೇಳಿಬಂದಿತ್ತು. ವಿಮಾನ ನಿಲ್ದಾಣವನ್ನು ನಿರ್ವಹಿಸುವಲ್ಲಿ ಅನುಭವವಿದೆ ಎಂದು ಮುಖ್ಯಮಂತ್ರಿ ಹೇಳುವ ಮುಖ್ಯ ಕಂಪನಿಯಾದ ಸಿಯಾಲ್ ಕಂಪೆನಿಯು ಬಿಡ್ ನಲ್ಲಿ ಭಾಗವಹಿಸದೆ ಪ್ರತ್ಯೇಕ ಕಂಪನಿಯನ್ನು ಸ್ಥಾಪಿಸಲು ಯಾರು ಆಸಕ್ತಿ ಹೊಂದಿದ್ದಾರೆ ಎಂಬುದನ್ನು ಸಿಎಂ ಸ್ಪಷ್ಟಪಡಿಸಬೇಕು ಎಂದು ಮುರಲೀಧರನ್ ಒತ್ತಾಯಿಸಿದರು.
ಇದರ ಹಿಂದೆ ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಶಿವಶಂಕರನ್ ಮತ್ತು ಇತರರು ಇದ್ದಾರೆಯೇ ಎಂದು ಮುಖ್ಯಮಂತ್ರಿ ವಿಚಾರಿಸಬೇಕು. ಕೇಂದ್ರವನ್ನು ಅನಗತ್ಯವಾಗಿ ದೂಷಿಸುವ ಮೂಲಕ ಜನರನ್ನು ದಾರಿ ತಪ್ಪಿಸಬಾರದು ಎಂದರು.
ಕೆ.ಎಸ್.ಆರ್.ಟಿ.ಸಿ.ಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಎಂ.ಡಿ ದೂರು ನೀಡಿದ್ದರು. ಸಾರ್ವಜನಿಕವಾಗಿ ಪ್ರತಿಕ್ರಿಯಿಸುವುದನ್ನು ಸಹ ಈ ಹಂತದಲ್ಲಿ ನೆನಪಿನಲ್ಲಿಡಬೇಕು. ಕೇರಳ ಸರ್ಕಾರವು ಕೇಂದ್ರವು ವಿಮಾನ ನಿಲ್ದಾಣವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಟೀಕಿಸುವಾಗ,ರಾಜ್ಯ ಸರ್ಕಾರ ತನ್ನ ಸುಪರ್ಧಿಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಭ್ರಷ್ಟಾಚಾರವನ್ನು ನೆನಪಿಸದಿರುವುದು ಹಾಸ್ಯಾಸ್ಪದವಾಗಿದೆ ಎಂದು ಸಚಿವರು ಹೇಳಿದರು.