ಬದಿಯಡ್ಕ: ನೀರ್ಚಾಲು ಸಮೀಪದ ಮಾನ್ಯ ಕಾರ್ಮಾರು ಶ್ರೀಮಹಾವಿಷ್ಣು ಕ್ಷೇತ್ರದಲ್ಲಿ ಇಂದು (ಮಕರ ಮಾಸ 5)ನೇ ಮಂಗಳವಾರ ವಾರ್ಷಿಕ ಜಾತ್ರಾಮಹೋತ್ಸವ ನಡೆಯಲಿದೆ.
ಕೋವಿಡ್ ಮಾನದಂಡಗಳನ್ನು ಪಾಲಿಸಿ ಬೆಳಗ್ಗೆ ಗಣಪತಿಹವನ, ನವಕಾಭಿಷೇಕ ಹಾಗೂ ಭಜನೆ, ಸಂಜೆ 6. ಕ್ಕೆ ರಂಗಪೂಜೆ ನಂತರ ಶ್ರೀ ದೇವರ ಬಲಿ ನಡೆಯಲಿದೆ.
ಅಟ್ಟೆ ಅಲಂಕಾರ ಇರುವುದಿಲ್ಲ, ತಾಂತ್ರಿಕ ಸುತ್ತು ಮಾತ್ರ ಇರುವುದು, ಬೆಡಿ ಸೇವೆ ಇರುವುದಿಲ್ಲ, ಕಟ್ಟೆ ಪೂಜೆ ಇರುವುದು.
ಭಕ್ತ ಮಹಾಜನರು ಜಾತ್ರಾಮಹೋತ್ಸವದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ತನು ಮನ ಧನಗಳಿಂದ ಪಾಲ್ಗೊಂಡು ದೇವರಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಲಾಗಿದೆ.