ಪ್ರಸ್ತುತ ಹತ್ತು ಮತ್ತು ಪ್ಲಸ್ ಟು ತರಗತಿಗಳು ಕಠಿಣ ಕೋವಿಡ್ ನಿಬಂಧನೆಗಳೊಂದಿಗೆ ಆರಂಭಗೊಂಡಿದ್ದು,ಅಂತಿಮ ಪರೀಕ್ಷೆಗಳನ್ನು ಲಕ್ಷ್ಯವಾಗಿರಿಸಿ ಈಗಾಗಲೇ ನಡೆಯುತ್ತಿರುವ ಆನ್ ಲ್ಯೆನ್ ತರಗತಿಗಳ ಮುಂದುವರಿಕೆಯಾಗಿ ವಿದ್ಯಾರ್ಥಿಗಳ ಸಂಶಯ ನಿವಾರಣೆ, ಪ್ರಾಯೋಗಿಕ ತರಗತಿಗಳ ಪೂರಕ ಮಾರ್ಗದರ್ಶನಗಳ ತರಗತಿ ಆರಂಭಿಸಲಾಯಿತು. ವಿದ್ಯಾರ್ಥಿಗಳು ಕಡ್ಡಾಯವಾಗಿ ತರಗತಿಗೆ ಹಾಜರಾಗಬೇಕೆಂದಿಲ್ಲ ಎಂದು ಸರ್ಕಾರ ತಿಳಿಸಿದ್ದು,ದಿನದಲ್ಲಿ ಎರಡು ಹಂತಗಳಲ್ಲಿ(ಶಿಪ್ಟಪ್) ತರಗತಿ ನಡೆಯಲಿದ್ದು,ಐವತ್ತು ಪ್ರತಿಶತದಷ್ಟು ಮಕ್ಕಳು ಒಂದೊಂದು ಪಾಳಿಯಲ್ಲಿ ಹಾಜರಾಗಲು ಸೂಚಿಸಲಾಗಿದೆ.
(ಚಿತ್ರ: ನೀರ್ಚಾಲು ಮಹಾಜನ ಸಂಸ್ಕ್ರತ ಕಾಲೇಜು ಹ್ಯೆಸ್ಕೂಲಲ್ಲಿ ಶುಕ್ರವಾರ ನಡೆದ ಮೊದಲ ತರಗತಿ- ಹತ್ತನೇ ತರಗತಿ)