ಮಂಜೇಶ್ವರ: ಶ್ರೀಧರ್ಮ ದೈವ ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ ಹಾಗೂ ಸಂಸಾರ ದೈವಗಳ ಚೆಂಬಪದವು ತರವಾಡಿನಲ್ಲಿ ನೂತನ ತರವಾಡಿನ ಗೃಹಪ್ರವೇಶ ಫೆ.3 ರಂದು ನಡೆಯಲಿದ್ದು, ಈ ಸಂಬಂಧ ಆಮಂತ್ರಣ ಪತ್ರಿಕೆಯನ್ನು ಚೆಂಬದವು ಪರಿಸರದಲ್ಲಿ ಭಾನುವಾರ ನಡೆಯಿತು.
ಸಾಮಾಜಿಕ, ಧಾರ್ಮಿಕ ಮುಂದಾಳು ಹರೀಶ್ ಶೆಟ್ಟಿ ಮಾಡ ಬಿಡುಗಡೆಗೊಳಿಸಿದರು. ಗ್ರಾ.ಪಂ.ಸದಸ್ಯ ಹರೀಶ್ ಬಿ.ಎಂ. ಅಂಗಡಿಪದವು, ದೈವಪಾತ್ರಿಗಳಾದ ಸುರೇಶ್ ಕುಂಜತ್ತೂರು, ಪೂವಪ್ಪ ವಾಮಂಜೂರು, ಗೌರವಾಧ್ಯಕ್ಷ ಸೇಸಪ್ಪ ಚೆಂಬಪದವು, ಚಂದ್ರಶೇಖರ ಅಂಗಡಿಪದವು, ಗೌರವ ಸಲಹೆಗಾರ ತುಳಸೀದಾಸ್ ಮಂಜೇಶ್ವರ, ಸೀತಾರಾಮ ಸಂತಡ್ಕ, ಹರೀಶ್, ಪದ್ಮಿನಿ ಅಂಗಡಿಪದವು,ಚಂದ್ರಹಾಸ ಚೆಂಬಪದವು, ಹರೀಶ್ ತಚ್ಚಿರೆ, ನವೀನ್ ಬೆದ್ರಡ್ಕ, ಸೋಮನಾಥ ಅರಿಮಲೆ ಮೊದಲಾದವರು ಉಪಸ್ಥಿತರಿದ್ದರು. ಗರೀಶ್ ಕುಮಾರ್ ಬಿ.ಎಂ.ಸ್ವಾಗತಿಸಿ, ಅಶೋಕ ಕೊಡ್ಲಮೊಗರು ವಂದಿಸಿದರು.