ತಿರುವನಂತಪುರ: ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನ ಮುಂದುವರಿಯುತ್ತಿರುವಂತೆ ನಾಲ್ಕು ಶಾಸಕರಿಗೆ ಕೋವಿಡ್ ಖಚಿತವಾಗಿದ್ದು ಆತಂಕ ಮೂಡಿಸಿದೆ. ಶಾಸಕರಾದ ಮುಖೇಶ್, ಅನ್ಸಲಾನ್, ದಾಸನ್ ಮತ್ತು ಬಿಜಿ ಮೋಳ್ ಎಂಬವರಿಗೆ ಕೋವಿಡ್ ಖಚಿತಪಸಲಾಗಿದೆ.
ಕೋವಿಡ್ ದೃಢಪಡಿಸಿದ ನಾಲ್ವರು ಶಾಸಕರ ಆರೋಗ್ಯ ಸ್ಥಿತಿ ಗಂಭೀರವಾಗಿ ಈಗಿಲ್ಲ ಎಂದು ವರದಿಯಾಗಿದೆ. ಕೆ ದಾಸನ್ ಮತ್ತು ಅನ್ಸಲಾನ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಖೇಶ್ ಅವರನ್ನು ಮನೆಯಲ್ಲಿ ಕ್ವಾರಂಟೈನ್ ಗೊಳಪಡಿಸಲಾಗಿದೆ. ನಾಲ್ವರು ಶಾಸಕರು ವಿಧಾನಸಭೆ ಅಧ|ಇವೇಶನದಲ್ಲಿ ಶನಿವಾರದ ವರೆಗೆ ಪಾಲ್ಗೊಂಡಿದ್ದರು.