ಪತ್ತನಂತಿಟ್ಟು: ಶಬರಿಮಲೆ ಸನ್ನಿಧಿಯ ಮಕರ ಸಂಕ್ರಾಂತಿ ಉತ್ಸವದ ಮೊದಲು ನಡೆಯಲಿರುವ ದೇವರ ಆಭರಣ ಮೆರವಣಿಗೆ (ತಿರುವಾಭರಣ ಮೆರವಣಿಗೆ)ಯಲ್ಲಿ ಭಾಗವಹಿಸುವವರಿಗೆ ಕೋವಿಡ್ ಪರೀಕ್ಷೆಯನ್ನು ಉಚಿತವಾಗಿಸಲು ನಡೆಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮೆರವಣಿಗೆಯಲ್ಲಿ ಆಭರಣ ಪೆಟ್ಟಿಗೆ ಹೊರುವವರು ಸಹಿತ ಎಲ್ಲಾ ಸಂಬಂಧಿತ ಅಧಿಕೃತರು ಆರ್‍ಟಿಪಿಸಿಆರ್ ತಪಾಸಣೆಯನ್ನು ತಮ್ಮ ಸ್ವಂತ ಖರ್ಚಿನಲ್ಲಿ ಅನುಮತಿಸುವ ನಿರ್ಧಾರದ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು.
ಈ ಬಾರಿ ತಿರುವಾಭರಣ ಮೆರವಣಿಗೆ ಕೋವಿಡ್ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನಿಬಂಧನೆಗಳೊಂದಿಗೆ ನಡೆಯಲಿದೆ. ಮೆರವಣಿಗೆಯೊಂದಿಗೆ ಬರುವ ಪ್ರತಿಯೊಬ್ಬರೂ ಕೋವಿಡ್ ಪರೀಕ್ಷೆ ನಡೆಸಿರಬೇಕೆಂದು ಸರ್ಕಾರ ಆದೇಶಿಸಿದ್ದು ಆರ್‍ಟಿಪಿಸಿಆರ್ ಪರೀಕ್ಷೆಯು ಅಗತ್ಯವೆಂದು ಸೂಚಿಸಲಾಗಿದೆ.
ಮೆರವಣಿಗೆಯಲ್ಲಿ ಭಾಗವಹಿಸುವವರು ತಪಾಸಣೆಯ ವೆಚ್ಚವನ್ನು ಭರಿಸಲು ಈ ಹಿಂದೆ ಸೂಚಿಸಲಾಗಿತ್ತು. ಈ ಮಧ್ಯೆ ದೇವಸ್ವಂ ಸಲಹಾ ಸಮಿತಿಯು ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸೂಚಿಸಿದ ಪರಿಣಾಮ ಉಚಿತ ಪರೀಕ್ಷೆಯನ್ನು ನಡೆಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ತಿರುವಾಭರಣ ಮೆರವಣಿಗೆಯಲ್ಲಿ ಪೋಲೀಸರು ಸೇರಿದಂತೆ ಸುಮಾರು 130 ಜನರು ಭಾಗವಹಿಸಲಿದ್ದಾರೆ. ಕೋವಿಡ್ ಪರೀಕ್ಷೆಯನ್ನು ಪಂದಳಂನ ಖಾಸಗಿ ಆಸ್ಪತ್ರೆಯಲ್ಲಿ ನಡೆಸಲಾಗುವುದು.