ಕಾಸರಗೋಡು: ನೌಕರಿ ನಡೆಸಲು ಇಚ್ಚಿಸುವ ನಿರುದ್ಯೋಗಿಗಳು , ವೇತನ ತಳಹದಿಯಲ್ಲಿ ಶಾಶ್ವತ ನೌಕರಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಸಹಾಯದೊಂದಿಗೆ ಕುಟುಂಬಶ್ರೀ "ಉಚಿತ ನೌಕರಿ ತರಬೇತಿ ಮತ್ತು ನೇಮಕಾತಿ" ಎಂಬ ಯೋಜನೆಯನ್ನು ಕಾಸರಗೋಡು, ಕಾಞಂಗಾಡ್, ನೀಲೇಶ್ವರ ನಗರಗಳಲ್ಲಿ ಆರಂಭಿಸಲಿದೆ.
ನೌಕರಿ ತರಬೇತಿಯನ್ನು ಯಶಶ್ವಿಯಾಗಿ ಪೂರೈಸುವ ಮಂದಿಗೆ ರಾಷ್ಟ್ರೀಯ ಮಟ್ಟದ ಅರ್ಹತಾಪತ್ರ ಮತ್ತು ವಿವಿಧ ವಲಯಗಳಲ್ಲಿ ನೌಕರಿ ನೇಮಕಾತಿ ಒದಗಿಸಲಾಗುವುದು.
ನಗರಗಳಲ್ಲಿ ಬಡವರಿಗೆ ಉಚಿತ ನೌಕರಿ ತರಬೇತಿ ಮೂಲಕ ಶಾಶ್ವತ ಬದುಕಿನ ಮಾರ್ಗ ಒದಗಿಸುವ ರಾಷ್ಟ್ರೀಯ ನಗರ ಬದುಕಿನ ಮಾರ್ಗ ಮಿಷನ್ ಯೋಜನೆ ವ್ಯಾಪ್ತಿಯಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ. ನೌಕರಿ ಸಾಧ್ಯತೆ ಅಧ್ಯಯನ ಹಿನ್ನೆಲೆಯಲ್ಲಿ ರಚಿಸಲಾದ ಸರ್ಟಿಫೈಡ್ ತರಬೇತಿ ಮೂಲಕ ನೌಕರಿ ನಡೆಸಲು ಸಜ್ಜುಗೊಂಡಿರುವ ಎಲ್ಲ ನಿರುದ್ಯೋಗಿಗಳನ್ನು ಉಚಿತ ತರಬೇತಿ ಮತ್ತು ನೇಮಕಾತಿ ನೀಡಲಾಗುವುದು. ತರಬೇತಿಯ ನಂತರ ಸ್ವ ಉದ್ಯೋಗ ನಡೆಸಲು ಆಗ್ರಹಿಸುವವರಿಗೆ ಆ ನಿಟ್ಟಿನಲ್ಲಿ ಸಹಾಯಗಳನ್ನೂ ಒದಗಿಸಲಾಗುವುದು.
ಯಶಸ್ವಿಯಾಗಿ ತರಬೇತಿ ಪೂರ್ತಿಗೊಳಿಸುವವರಿಗೆ ಕೇಂದ್ರ ಸರಕಾರದ ಅಂಗೀಕಾರ ಎನ್.ಸಿ.ಟಿ.ಟಿ./ಎಸ್.ಎಸ್.ಸಿ. ಅರ್ಹತಾಪತ್ರಗಳು, ಖಾಸಗಿ ಸಂಸ್ಥೆಗಳಲ್ಲಿ ನೌಕರಿ ಲಭಿಸಲಿದೆ. ತರಬೇತಿ ಶುಲ್ಕ, ಕಲಿಕೋಪಕರಣಗಳು, ಪರೀಕ್ಷೆ ಶುಲ್ಕ, ವಸತಿ, ಆಹಾರ, ಯಾತ್ರೆ ಭತ್ಯೆ ಇತ್ಯಾದಿಗಳನ್ನು ಆಯಾ ನಗರಸಭೆ ವಹಿಸಲಿದೆ.
ಎಸ್.ಎಸ್.ಎಲ್.ಸಿ. ಯಿಂದ ತೊಡಗಿದ ವಿದ್ಯಾರ್ಹತೆ, 18ರಿಂದ 35 ವರ್ಷ ವರೆಗಿನ ವಯೋಮಾನ, ನಗರಸಭೆ ವ್ಯಾಪ್ತಿಯಲ್ಲಿ ಶಾಶ್ವತ ನಿವಾಸಿಗಳಾಗಿರುವ, ಕೌಟುಂಬಿಕ ಆದಾಯ ಒಂದು ಲಕ್ಷ ರೂ. ಗಿಂತ ಕಡಿಮೆಯಿರುವ ನಿರುದ್ಯೋಗಿಗಳಿಗೆ ಈ ಯೋಜನೆ ಪೂರಕವಾಗಲಿದೆ.
ತರಬೇತಿಯಲ್ಲಿ ಭಾಗವಹಿಸಲು ಆಗ್ರಹಿಸುವ ಮಂದಿ ಜ.7,8,9 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ವರೆಗೆ ಈ ಕೆಳಗೆ ತಿಳಿಸಲಾದ ನಂಬ್ರ ಗಳಿಗೆ ಕರೆ ಮಾಡಿ ಯಾ ವಾಟ್ಸ್ ಆಪ್ ನಂಬ್ರಕ್ಕೆ ಸಂದೇಶ ಕಳುಹಿಸಿ ಹೆಸರು ನೋಂದಣಿ ನಡೆಸಬೇಕು.
ಕಾಸರಗೋಡು ನಗರಸಭೆ ವ್ಯಾಪ್ತಿಯ ನಿವಾಸಿಗಳಿಗೆ : 9446751897.
ಕಾಞಂಗಾಡ್ ನಗರಸಭೆ ವ್ಯಾಪ್ತಿಯ ನಿವಾಸಿಗಳಿಗೆ : 9447505735.
ನೀಲೇಶ್ವರ ನಗರಸಭೆ ವ್ಯಾಪ್ತಿಯ ನಿವಾಸಿಗಳಿಗೆ : 9746260688.