ನವದೆಹಲಿ: ಮಧ್ಯಾಹ್ನದ ಬಿಸಿಯೂಟ ಯೋಜನೆಯಿಂದ ದೇಶದಲ್ಲಿರುವ ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಹೀಗಾಗಿ ಶಾಲೆಗಳು ಆರಂಭಗೊಂಡ ಬೆನ್ನಲ್ಲೇ ಈ ಯೋಜನೆಯನ್ನೂ ಆರಂಭಿಸುವಂತೆ 'ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮ'ದ (ಯುಎನ್‌ಡಬ್ಲ್ಯುಎಫ್‌ಪಿ ಇಂಡಿಯಾ) ಭಾರತದ ಘಟಕ ಒತ್ತಾಯಿಸಿದೆ.
ಕೋವಿಡ್ ಪಿಡುಗಿನಿಂದಾಗಿ ಲಾಕ್‌ಡೌನ್ ಹೇರಿದ ಕಾರಣ ಶಾಲೆಗಳು ಸಹ ಮುಚ್ಚಿದ್ದವು. ಆದರೆ, ಇಂಥ ಪಿಡುಗು, ಸಂಕಷ್ಟದ ಸಂದರ್ಭದಲ್ಲಿ ಸಹ ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಕೆ ಸ್ಥಗಿತಗೊಂಡಿರಲಿಲ್ಲ ಎಂದು ಯುಎನ್‌ಡಬ್ಲ್ಯುಎಫ್‌ಪಿ ಇಂಡಿಯಾದ ನಿರ್ದೇಶಕ ಬಿಶೂ ಪರಾಜುಲಿ ಹೇಳಿದ್ದಾರೆ.
ತಾನು ಜಾರಿಗೊಳಿಸಿರುವ ಆಹಾರ ಭದ್ರತೆ ಯೋಜನೆಯಿಂದ ಇದು ಸಾಧ್ಯವಾಗಿದೆ ಎಂಬುದನ್ನು ಭಾರತ ಇಡೀ ಜಗತ್ತಿಗೇ ತೋರಿಸಿಕೊಟ್ಟಿದೆ ಎಂದೂ ಹೇಳಿದ್ದಾರೆ.