ಕಾಸರಗೋಡು: ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಅವರು ಮುನ್ನಡೆಸುವ "ಐಶ್ವರ್ಯ ಕೇರಳ ಯಾತ್ರೆ" ಇಂದು ಕುಂಬಳೆಯಿಂದ ಪ್ರಾರಂಭವಾಗಲಿದೆ. ಯಾತ್ರೆಯ ಮುನ್ನುಡಿಯಾಗಿ ಶನಿವಾರ ಚೆನ್ನಿತ್ತಲ ಅವರು ಕೇರಳದ ಆರಾಧ್ಯಮೂರ್ತಿ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಚೆನ್ನಿತ್ತಲಾ ಅವರು ಕೆ.ಎಸ್.ಯು, ಯೂತ್ ಕಾಂಗ್ರೆಸ್ ಮತ್ತು ಕೆ.ಪಿ.ಸಿ.ಸಿ ಅಧ್ಯಕ್ಷರಾಗಿದ್ದಾಗ ಅವರ ನೇತೃತ್ವದ ಎಲ್ಲಾ ರಾಜಕೀಯ ಯಾತ್ರೆಗಳಿಗೂ ಮುನ್ನ ಕೊಲ್ಲೂರಿಗೆ ಭೇಟಿ ನೀಡಿ ಯಾತ್ರೆಗೆ ತೊಡಗಿಸಿಕೊಳ್ಳುತ್ತಿದ್ದರೆಂಬುದು ಉಲ್ಲೇಖಾರ್ಹ. ಐಶ್ವರ್ಯ ಕೇರಳ ಯಾತ್ರೆಗೆ ಸೌಪರ್ಣಿಕ ದಡದಲ್ಲಿರುವ ವಾಗ್ದೇವಿ ಮಂಟಪ ತಲುಪಿ ಐಶ್ವರ್ಯ ಕೇರಳಕ್ಕಾಗಿ ಪ್ರಾರ್ಥಿಸಿದರು.
ಕೊಲ್ಲೂರು ಮೂಕಂಬಿಕಾ ದೇವಸ್ಥಾನವು 110 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಸಿದ್ಧಿ ದೇವಾಲಯವಾಗಿರುವುದರಿಂದ ಶುಭವನ್ನು ಪ್ರಾರಂಭಿಸಲು ಕೊಲ್ಲೂರು ಸೂಕ್ತ ಸ್ಥಳವಾಗಿದೆ. ಇಲ್ಲಿಂದ, ಪ್ರತಿಪಕ್ಷ ನಾಯಕರ ಭೇಟಿ ಇದೀಗ ಕುತೂಹಲ ಮೂಡಿಸಿದೆ.
ಕುಂಬಳೆಯಲ್ಲಿ ಇಂದು ಸಂಜೆ ಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಮಾಜಿ ಮುಖ್ಯಮಂತ್ರಿ ಮತ್ತು ಚುನಾವಣಾ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷ ಉಮ್ಮನ್ ಚಾಂಡಿ ಯಾತ್ರೆ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಎಲ್ಲಾ ಯುಡಿಎಫ್ ನಾಯಕರು ಭಾಗವಹಿಸಲಿದ್ದಾರೆ.
ಸ್ವಚ್ಚ ಉತ್ತಮ ಆಡಳಿತ ಎಂಬುದು ಈ ಬಾರಿಯ ಯಾತ್ರೆಯ ಧ್ಯೇಯವಾಕ್ಯವಾಗಿದೆ. 140 ಕ್ಷೇತ್ರಗಳ ಮೂಲಕ ಪ್ರಯಾಣಿಸುವ ಐಶ್ವರ್ಯ ಕೇರಳ ಯಾತ್ರೆ ಫೆಬ್ರವರಿ 22 ರಂದು ತಿರುವನಂತಪುರದಲ್ಲಿ ಕೊನೆಗೊಳ್ಳಲಿದೆ.
ಮೊದಲ ದಿನ ಚೆಂಗಳದಲ್ಲಿ ಯಾತ್ರೆಗೆ ಸ್ವಾಗತ ನೀಡಲಾಗುವುದು. ನಾಳೆ ಬೆಳಿಗ್ಗೆ 10 ಗಂಟೆಗೆ ಪೆರಿಯ, ಬಳಿಕ ಕಾಞಂಗಾಡ್ ನಲ್ಲಿ 11 ಮತ್ತು ತೃಕ್ಕರಿಪುರದಲ್ಲಿ ಮಧ್ಯಾಹ್ನ 12 ಗಂಟೆಗೆ ಸ್ವಾಗತ ನಡೆಯಲಿದೆ.
ಯುಡಿಎಫ್ ಪ್ರಮುಖರಾದ ಉಮ್ಮನ್ ಚಾಂಡಿ, ಮುಲ್ಲಪ್ಪಳ್ಳಿ ರಾಮಚಂದ್ರನ್, ಪಿ.ಕೆ.ಕುಂಞಲಿಕುಟ್ಟಿ, ಎಂ.ಎಂ.ಹಸನ್, ಪಿ.ಜೆ.ಜೋಸೆಫ್, ಎನ್.ಕೆ.ಪ್ರೇಮಚಂದ್ರನ್, ಅನೂಪ್ ಜಾಕೋಬ್, ಸಿ.ಪಿ.ಜಾನ್, ಮತ್ತು ಇತರರು ಯಾತ್ರೆ ಮುನ್ನಡೆಸುವರು. ಫೆಬ್ರವರಿ 22 ರಂದು ತಿರುವನಂತಪುರದಲ್ಲಿ ಕೊನೆಗೊಳ್ಳಲಿದೆ. ಮಹಾ ರ್ಯಾಲಿಯೊಂದಿಗೆ ಕೊನೆಗೊಳ್ಳುವ ಯಾತ್ರೆಯ ಮುಕ್ತಾಯದಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಭಾಗವಹಿಸಲಿದ್ದಾರೆ. ಈ ಮಧ್ಯೆ, ಚುನಾವಣೆ ಘೋಷಣೆಯಾಗುವ ನಿರೀಕ್ಷೆಯಿದೆ.