ನವದೆಹಲಿ: ಲಡಾಖ್ ಭಾಷೆ, ಸಂಸ್ಕೃತಿ ಸಂರಕ್ಷಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಗೃಹ ವ್ಯವಹಾರಗಳ ಸಚಿವ ಜಿ. ಕಿಶನ್ ರೆಡ್ಡಿ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲು ಗೃಹ ಸಚಿವಾಲಯ(ಎಂಎಚ್‌ಎ) ಸೋಮವಾರ ನಿರ್ಧರಿಸಿದೆ.
ಜನಾಂಗೀಯತೆ, ಭೂಮಿ, ಉದ್ಯೋಗಗಳು ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಸ್ಥಳೀಯರ ಭಾಗವಹಿಸುವಿಕೆ ಕುರಿತು ಈ ಸಮಿತಿ ಪರಿಶೀಲನೆ ನಡೆಸಲಿದೆ.
ಈ ಸಮಿತಿಯು ಲಡಾಖ್‌ನಿಂದ ಚುನಾಯಿತ ಸದಸ್ಯರು, ಲಡಾಖ್ ಏರಿಯಾ ಅಭಿವೃದ್ಧಿ ಪರಿಷತ್ ಸದಸ್ಯರು ಮತ್ತು ಕೇಂದ್ರ ಸರ್ಕಾರ ಮತ್ತು ಲಡಾಕ್ ಆಡಳಿತವನ್ನು ಪ್ರತಿನಿಧಿಸುವ ಸದಸ್ಯರನ್ನು ಒಳಗೊಂಡಿರುತ್ತದೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉತ್ತರ ಬ್ಲಾಕ್‌ನಲ್ಲಿ ಲಡಾಕ್‌ನ 10 ನಿಯೋಗದೊಂದಿಗೆ ಚರ್ಚೆ ನಡೆಸಲಾಯಿತು.