ತಿರುವನಂತಪುರ: ಸಂಸತ್ತಿಗೆ ಆಯ್ಕೆಯಾದ ಮೊದಲ ದಲಿತ ಮಹಿಳೆ ದಾಕ್ಷಾಯಣಿ ವೇಲಾಯುಧನ್ ಅವರ ಹೆಸರಿನಲ್ಲಿ ಕೇರಳ ಸರ್ಕಾರ ವಾರ್ಷಿಕ ಪ್ರಶಸ್ತಿ ಸ್ಥಾಪಿಸಿದೆ.
ನಿರ್ಗತಿಕ ಮಹಿಳೆಯ ಸಬಲೀಕರಣಕ್ಕಾಗಿ ಕೆಲಸ ಮಾಡುವ ಮತ್ತು ತಳಸಮುದಾಯದ ಮಹಿಳೆಯರ ಉನ್ನತೀಕರಣಕ್ಕಾಗಿ ಶ್ರಮಿಸುವ ಮಹಿಳೆಯರಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಕೇರಳದ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಸೋಮವಾರ ಹೇಳಿದರು.
ಪ್ರಶಸ್ತಿಯು 1 ಲಕ್ಷ ನಗದು ಮತ್ತು ಫಲಕವನ್ನು ಹೊಂದಿದ್ದು, ಪ್ರಶಸ್ತಿ ಸ್ಥಾಪನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಇದೇ ವರ್ಷದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದೂ ಅವರು ವಿವರಿಸಿದರು.
2019ರ ರಾಜ್ಯ ಬಜೆಟ್ ಮಂಡಿಸುವಾಗ ಹಣಕಾಸು ಸಚಿವ ಟಿ.ಎಂ. ಥಾಮಸ್ ಐಸಾಕ್ ಅವರು ಪ್ರಶಸ್ತಿ ಸ್ಥಾಪನೆ ಕುರಿತು ಘೋಷಿಸಿದ್ದರು. ಇದಕ್ಕಾಗಿ 2 ಕೋಟಿ ಮೀಸಲಿಡಲಾಗಿತ್ತು.