ನವದೆಹಲಿ:ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಮಂಗಳವಾರ ಬೃಹತ್ ಟ್ರ್ಯಾಕ್ಟರ್ ರ್ಯಾಲಿಗೆ ದೆಹಲಿ ಪೊಲೀಸರು ಷರತ್ತು ಬದ್ಧ ಅನುಮತಿ ನೀಡಿರುವ ಬೆನ್ನಿಗೇ ಟಿಕ್ರಿ ಗಡಿಯಿಂದ ರೈತರು ದೆಹಲಿಯತ್ತ ನುಗ್ಗಲು ಯತ್ನಿಸುತ್ತಿರುವುದಾಗಿ ಇದೀಗ ತಿಳಿದುಬಂದಿದ್ದು ಸಂಘರ್ಷದ ಸಾಧ್ಯತೆಯನ್ನು ಎತ್ತಿದೆ.
ಈ ಹಿಂದಿನ ಚರ್ಚೆಯಲ್ಲಿ ಪ್ರತಿಭಟನೆಗೆ ಮೂರು ಮಾರ್ಗಗಳನ್ನು ನಿಗದಿಪಡಿಸಲಾಗಿತ್ತು. ವಿವಿಧ ರಾಜ್ಯಗಳ 2 ಲಕ್ಷಕ್ಕೂ ಅಧಿಕ ಟ್ರ್ಯಾಕ್ಟರ್ ಗಳು ಈ ರ್ಯಾಲಿಯಲ್ಲಿ ಭಾಗಿಯಾಗಲಿವೆ ಎನ್ನಲಾಗಿತ್ತು.
ಅಲ್ಲದೆ ಗಣರಾಜ್ಯೋತ್ಸವ ಸಮಾರಂಭ ಮುಗಿಯುತ್ತಿದ್ದಂತೆ ಉತ್ತರ ಪ್ರದೇಶ ಹಾಗೂ ಹರಿಯಾಣಕ್ಕೆ ಹೊಂದಿಕೊಂಡಿರುವ ಟಿಕ್ರಿ, ಸಿಂಘಿ ಮತ್ತು ಘಾಜಿಯಾಬಾದ್ ಗಡಿಯಿಂದ ರೈತರು ಏಕ ಕಾಲದಲ್ಲಿ ಟ್ರ್ಯಾಕ್ಟರ್ ಜಾಥಾ ನಡೆಸುವುದಾಗಿ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಬಿಗಿ ಭದ್ರತೆಯನ್ನು ನಿಯೋಜನೆಗೊಳಿಸಲಾಗಿದೆ.
ಆದರೆ ನಿಗದಿತ ಸಮಯಕ್ಕಿಂತ ಮೊದಲೇ ಗಣರಾಜ್ಯೋತ್ಸವ ಸಮಾರಂಭ ಆರಂಭಗೊಳ್ಳುತ್ತಿರುವಂತೆ ಪ್ರತಿಭಟನೆಗೆ ಮುನ್ನುಗ್ಗಲು ತೊಡಗಿರುವುದು ಆತಂಕ ಮೂಡಿಸಿದೆ.