ಕಾಸರಗೋಡು: ಪ್ರತ್ಯೇಕ ಬೆಳವಣಿಗೆಯೊಂದರಲ್ಲಿ ದಲಿತ್ ಲೀಗ್ ಜಿಲ್ಲಾಧ್ಯಕ್ಷ, ಕುಂಬಳೆ ಗ್ರಾಮ ಪಂಚಾಯತಿ ನಿಕಟಪೂರ್ವ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್. ಪಕ್ಷದ ಜಿಲ್ಲಾಧ್ಯಕ್ಷ ಹುದ್ದೆ ಸಹಿತ ದಲಿತ್ ಲೀಗ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ದಲಿತ್ ಲೀಗ್ ಜಿಲ್ಲಾ ಘಟಕವು ತನ್ನ ತಿಳುವಳಿಕೆಗೆ ಬಾರದಂತೆ ವಿವಿಧ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದು ತೀವ್ರ ಇರಿಸು-ಮುರಿಸಿಗೆ ಕಾರಣವಾಗಿದೆ. ಜಿಲ್ಲಾಧ್ಯಕ್ಷನಾಗಿ ತನಗೆ ತಿಳಿಯದಂತೆ ವ್ಯವಹರಿಸುವ ಮೂಲಕ ಸಂಶಯಾಸ್ಪದ ನಡೆ ಮತ್ತು ವ್ಯಕತಿತ್ವಕ್ಕೆ ಧಕ್ಕೆ ತರುವ ಯತ್ನದಿಂದ ಬೇಸತ್ತಿರುವುದಾಗಿ ಪುಂಡರೀಕಾಕ್ಷ ಕೆ.ಎಲ್ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ಕುಂಬಳೆ ಗ್ರಾ.ಪಂ. ಹಾಲಿ ಅಧ್ಯಕ್ಷರಿಗೆ ಇತ್ತೀಚೆಗೆ ನಿವೇದನೆಯೊಂದನ್ನು ನೀಡಿ ಗ್ರಾ.ಪಂ. ಕಾರ್ಯಾಲಯದೊಳಗೆ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿರುವ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ್ದೆ. ಆದರೆ ತನ್ನ ಮನವಿಗೆ ಯಾವುದೇ ಕ್ರಮ ಕೈಗೊಳ್ಳದೆ, ತಿರಸ್ಕರಿಸಿ ಅಪರಾಧಿ ತಾನೆಂಬಂತೆ ಆಡಳಿತ ಪಕ್ಷದವರು ನಿರುತ್ಸಾಹಿತರಾಗಿರುವುದರಿಂದ ಬೇಸತ್ತಿರುವುದಾಗಿ ಪುಂಡರೀಕಾಕ್ಷ ಕೆ.ಎಲ್ ತಿಳಿಸಿದ್ದಾರೆ.