ಕೋಝಿಕ್ಕೋಡ್: ಒಂದು ಗಂಟೆಯಲ್ಲಿ 172 ವಿಧದ ಭಕ್ಷ್ಯ ತಯಾರಿಸಿರುವ ಕೇರಳದ 9 ವರ್ಷದ ಬಾಲಕ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ್ದಾನೆ.
ನಾಲ್ಕನೇ ವರ್ಷದಿಂದ ಅಡುಗೆ ಮಾಡುವುದರಲ್ಲಿ ಆಸಕ್ತಿ ಬೆಳೆಸಿಕೊಂಡ ಫೆರೋಕ್ ನ 9 ವರ್ಷದ ಹಯಾನ್ ಅಬ್ದುಲ್ಲಾ, 1 ಗಂಟೆಯಲ್ಲಿ ಬಿರಿಯಾನಿ, ಜ್ಯೂಸ್, ಪ್ಯಾನ್ ಕೇಕ್, ದೋಸೆ, ಮಿಲ್ಕ್ ಶೇಕ್, ಮತ್ತು ಚಾಕೋಲೇಟ್ಸ್ ತಯಾರು ಮಾಡಿದ್ದಾನೆ.
ಅಡುಗೆ ಮಾಡುವುದನ್ನು ಹವ್ಯಾಸವಾಗಿಸಿಕೊಂಡಿರು ಹಯಾನ್ ತನ್ನ ತಾಯಿಗೆ ಅಡುಗೆ ಮಾಡಲು ಸಹಾಯ ಮಾಡುತ್ತಿದ್ದನು. ಆತನ ಪೋಷಕರು ಚೆನ್ನೈನಲ್ಲಿ ರೆಸ್ಟೋರೆಂಟ್ಗಳ ನಡೆಸುತ್ತಿದ್ದಾರೆ. ಅವರ ತಂದೆ ಹಶ್ನಾಸ್ ಅಬ್ದುಲ್ಲಾ ಪಯೋಲಿಯವರು ಮತ್ತು ತಾಯಿ ಫಿರೋಕ್ ಮೂಲದವರಾಗಿದ್ದಾರೆ.
ನಾನು ವೇಗವಾಗಿ ಅಡುಗೆ ಮಾಡುವುದನ್ನು ನನ್ನ ಕುಟುಂಬ ಗಮನಿಸಿತು, ಆಗ ನಾನು ಅದರ ಮೇಲೆ ಏಕೆ ಕೆಲಸ ಮಾಡಬಾರದು ಮತ್ತು ಹೇಗ ವಿಭಿನ್ನವಾಗಿರಬೇಕೆಂದು ಯೋಚಿಸಿದೆ. ಕಳೆದ ಒಂದು ವಾರದಿಂದ, ನಾನು ನನ್ನ ಅಡುಗೆ ಸಮಯವನ್ನು ರೆಕಾರ್ಡ್ ಮಾಡುತ್ತಿದ್ದೇನೆ. ಸ್ಪರ್ದೆಗಾಗಿ ಯಾವುದೇ ವಿಶೇಷ ತಯಾರಿ ನಡೆಸಿಲ್ಲ ಎಂದು ಹಯಾನ್ ತಿಳಿಸಿದ್ದಾನೆ.
ಚೆನ್ನೈನ ಶೆರ್ವುಡ್ ಹಾಲ್ ಸೀನಿಯರ್ ಸೆಕೆಂಡರಿ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿಯಾಗಿರುವ ಹಯಾನ್ ಕೊರೋನಾ ಹಿನ್ನೆಲೆಯಲ್ಲಿ ಆನ್ ಲೈನ್ ನಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಹಯಾನ್ ಡೆಲಿಕೇಟ್ಸ್ ಎಂಬ ಯೂಟ್ಯೂಬ್ ಚಾನಲ್ ಕೂಡ ಹೊಂದಿದ್ದಾರೆ. ವಿವಿಧ ಅಡುಗೆಗಳ ಬಗ್ಗೆ ಇಂಗ್ಲೀಷ್, ಮಲಾಯಾಳಂ ಮತ್ತು ತಮಿಳು ಭಾಷೆಗಳಲ್ಲಿ ವಿವರಣೆ ದೊರೆಯುತ್ತದೆ, ತಾನು ಪೈಲಟ್ ಆಗಬೇಕೆಂಬುದು ಹಯಾನ್ ಮಹಾದಾಸೆಯಾಗಿದೆ. ಪಾಸ್ತಾ ಬಾರ್ ಸ್ಥಾಪಿಸಬೇಕೆಂಗು ಹಯಾನ್ ಕನಸಾಗಿದೆ.