ಡೆಹ್ರಾಡೂನ್: ಉತ್ತರಾಖಂಡ್ ನ ಹರಿದ್ವಾರದಲ್ಲಿ ಏಪ್ರಿಲ್ 1-30 ವರೆಗೆ ಮಹಾಕುಂಭಮೇಳ-2021 ನಡೆಯಲಿದ್ದು, ಕೋವಿಡ್-19 ಕಾರಣದಿಂದ ಯಾವುದೇ ವಿಶೇಷ ರೈಲುಗಳೂ ಇಲ್ಲ ಎಂದು ಸರ್ಕಾರ ಘೋಷಿಸಿದೆ.
ಮಹಾಕುಂಭ ಮೇಳದ ಬಗ್ಗೆ ಮಾಹಿತಿ ನೀಡಿರುವ ಉತ್ತರಾಖಂಡ್ ನ ರಾಜ್ಯ ಮುಖ್ಯ ಕಾರ್ಯದರ್ಶಿ ಓಂ ಪ್ರಕಾಶ್, ಕುಂಭಮೇಳ ಏ.1 ರಿಂದ 30 ವರೆಗೆ ನಡೆಯಲಿದೆ ಉತ್ತರಾಖಂಡ್ ಸರ್ಕಾರದ ಅನುಮತಿ ಇಲ್ಲದೇ ವಿಶೇಷ ರೈಲು ಬಸ್ ಗಳ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯ 1.46 ಲಕ್ಷ ಕೋವಿಡ್-19 ಲಸಿಕೆಗಳನ್ನು ಪಡೆದಿದೆ. ವಿಶೇಷವಾಗಿ ಧಾರ್ಮಿಕ ಸಭೆ ನಡೆಯುವುದರಿಂದ ಕ್ರಮ ಕೈಗೊಳ್ಳಲಾಗಿದೆ. ಕುಂಭಮೇಳ ನಡೆಯುವುದರಿಂದ ರಾಜ್ಯ ಸರ್ಕಾರ 2 ಲಕ್ಷ ಹೆಚ್ಚುವರಿ ಡೋಸ್ ಗಳಿಗೆ ಮನವಿ ಮಾಡಿತ್ತು. ಈ ಪೈಕಿ 1.4 ಲಕ್ಷ ಡೋಸ್ ಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಹೇಳಿದ್ದಾರೆ.
ಕೊರೋನಾ ಹಿನ್ನೆಲೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವುದನ್ನು ತಡೆಯುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ ಸಿಸಿಟಿವಿ ಕ್ಯಾಮರಾಗಳು ಎಐ ಚಾಲಿತ ಸಾಫ್ಟ್ ವೇರ್ ಗಳ ಮೂಲಕ, ಕುಂಭಮೇಳಕ್ಕೆ ಭೇಟಿ ನೀಡುವ ಜನರ ಸಂಖ್ಯೆಯನ್ನು ನಿಖರವಾಗಿ ಪತ್ತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಮಹಾಕುಂಭಮೇಳಕ್ಕೆ ಭೇಟಿ ನೀಡುವವರು www.haridwarkumbhmela2021.com ನಲ್ಲಿ ನೋಂದಣಿ ಮಾಡಿ ವಿವರಗಳನ್ನು ಸಲ್ಲಿಸಬೇಕಾಗುತ್ತದೆ. ಸುಮಾರು 800 ಕೋಟಿ ರೂಪಾಯಿ ವೆಚ್ಚದಲ್ಲಿ ಕುಂಭಮೇಳವನ್ನು ಆಯೋಜನೆ ಮಾಡಲಾಗುತ್ತಿದೆ.