ತಿರುವನಂತಪುರ: ರಾಜ್ಯದಲ್ಲಿ ವಿರೋಧವೆದ್ದಿರುವ ತಾತ್ಕಾಲಿಕ ನೌಕರರ ಖಾರ್ಯ ಗೊಳಿಸುವಿಕೆಯಲ್ಲಿ ವಿಶೇಷ ಸೇರ್ಪಡೆ ಅಥವಾ ಲೋಪವನ್ನು ಸರ್ಕಾರ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಪರಿಗಣನೆ ಇಲ್ಲ ಮತ್ತು ಪಿಎಸ್‍ಸಿ ಕಳೆದ 10 ವರ್ಷಗಳಿಂದ ತಾತ್ಕಾಲಿಕ ಉದ್ಯೋಗಿಗಳನ್ನು ನಿಗದಿಪಡಿಸಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿರುವರು.
"ತಾತ್ಕಾಲಿಕ ನೇಮಕಾತಿಗಳ ಖಾಯಂಗೊಳಿಸುವಿಕೆಯ ಹಿಂದೆ ಯಾವುದೇ ನಿರ್ದಿಷ್ಟ ಸೇರ್ಪಡೆ ಅಥವಾ ಹೊರಗಿಡುವಿಕೆ ಕಂಡುಬಂದಿಲ್ಲ. ಯಾವುದೇ ರೀತಿಯ ರಾಜಕೀಯ ಪರಿಗಣನೆ ಇರದು. ಅನೇಕ ಜನರು ಹಲವು ಸಂಸ್ಥೆಯಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದಾರೆ. 10-20 ವರ್ಷಗಳಿಂದ ವಿವಿಧ ಸಂಸ್ಥೆಗಳಲ್ಲಿ ಅರೆಕಾಲಿಕರಾಗಿ ಸೇವೆ ಸಲ್ಲಿಸುವ ಅತಂತ್ರ ನೌಕರರಿಗೆ ಸರ್ಕಾರದ ಈ ನಿರ್ಧಾರದಿಂದ ಉಪಯೋಗವಾಗುವುದೆಂದು ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಖಾರ್ಯಗೊಂಡಲ್ಲಿ ಹಲವು ಪ್ರಯೋಜನಗಳು ನೌಕರರಿಗೆ ಲಭ್ಯವಾಗಿದೆ. ಈ ತಾತ್ಕಾಲಿಕ ಉದ್ಯೋಗಿಗಳನ್ನು ಖಾಯಂ ಗೊಳಿಸುವ ಭಾಗವಾಗಿ ಯಾವುದೇ ಪಿಎಸ್‍ಸಿ ಶ್ರೇಣಿಯ ಪಟ್ಟಿ ಮಾಡುವವರಿಗೆ ಉದ್ಯೋಗ ನಿರಾಕರಿಸಲಾಗುವುದಿಲ್ಲ. ಇಲ್ಲಿ ಖಾಲಿ ಇರುವ ಹುದ್ದೆಗಳನ್ನು ಪಿಎಸ್‍ಸಿಗೆ ಬಿಟ್ಟಿಲ್ಲ. ಅಂತಹ ಸಂಸ್ಥೆಗಳಲ್ಲಿ ತಾತ್ಕಾಲಿಕ ಜನರನ್ನು ಶಾಶ್ವತಗೊಳಿಸಲಾಗುತ್ತದೆ. ಅವರನ್ನು ವಜಾಗೊಳಿಸದಂತೆ ಕೇಳಿದರೆ ಅದನ್ನು ಮಾನವೀಯ ಪರಿಗಣನೆಯ ಭಾಗವಾಗಿ ಸರಿಪಡಿಸಲಾಗುವುದು ಎಂದು ಸಿಎಂ ಹೇಳಿದರು.
ಸರ್ಕಾರವೇ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಿದೆ. ಸರ್ಕಾರ ಹೊಸ ಹುದ್ದೆಗಳನ್ನು ರಚಿಸಿ ಉದ್ಯೋಗ ವಿನಿಮಯದ ಮೂಲಕ ನೇಮಕಾತಿಗಳನ್ನು ಮಾಡಿದೆ ಎಂದು ಸಿಎಂ ಹೇಳಿದರು.