ತಿರುವನಂತ ಪುರ: ಕೋವಿಡ್ ಲಾಕ್ ಡೌನ್ ಬಳಿಕ ಮೊದಲ ಬಾರಿಗೆ ಕೆ.ಎಸ್.ಆರ್.ಟಿ.ಸಿ.ಯ ಮಾಸಿಕ ಆದಾಯ 100 ಕೋಟಿ ರೂ. ಏರಿಕೆಯಾಗಿ ದಾಖಲೆ ನಿರ್ಮಿಸಿದೆ. 100 ಕೋಟಿ 46 ಲಕ್ಷ ರೂ.ಗಳು ಕಳೆದ ಜನವರಿ ತಿಂಗಳ ಸೇವೆಯಿಂದ ಪಡೆಯಲಾಗಿದೆ. ಆದರೆ ಜನವರಿಯ ಸಂಬಳ ಮತ್ತು ಪಿಂಚಣಿಗಳನ್ನು ಪಾವತಿಸಲು ಸರ್ಕಾರಕ್ಕೆ ಇದು ಸಾಕಾಗದೆಂದು ಅಧಿಕೃತರೊಬ್ಬರು ತಿಳಿಸಿದ್ದಾರೆ.
ಕೆ.ಎಸ್.ಆರ್.ಟಿ.ಸಿ. ಕಳೆದ 5 ತಿಂಗಳಿಂದ ಸರ್ಕಾರದ ಧನಸಹಾಯ ನೆರವಿನೊಂದಿಗೆ ಕಾರ್ಯವೆಸಗತ್ತಿದೆ. ವೇತನ ಮತ್ತು ಪಿಂಚಣಿಗಾಗಿ ಸರ್ಕಾರದ ನೆರವು ತಿಂಗಳಿಗೆ 133 ಕೋಟಿ ರೂ. ಬೇಕಾಗುತ್ತಿದೆ.
ಲಾಕ್ ಡೌನ್ ನಲ್ಲಿ ಇಳಿಕೆ ಕಂಡ ಸಂಗ್ರಹ ಜುಲೈನಲ್ಲಿ ಕೇವಲ 21.38 ಕೋಟಿ ರೂ.ಗಳಾಗಿತ್ತು. ಅಲ್ಲಿಂದ ಜನವರಿಯಲ್ಲಿ 100 ಕೋಟಿ ರೂ.ಏರಿಕೆಯಾಗಿ ಭರವಸೆ ಮೂಡಿಸಿದೆ. 5000 ಸೇವೆಗಳಿದ್ದಲ್ಲಿ ಈಗ ಕೇವಲ 3200 ಬಸ್ ಸೇವೆಗಳು ಮಾತ್ರ ಇದೆ.
ಮುಂದೆ ಇನ್ನಷ್ಟು ಹೆಚ್ಚಿನ ಸೇವೆಗಳು ಪುನರಾರಂಭಗೊಂಡಾಗ ಹಳೆಯ ಸರಾಸರಿ ಮಾಸಿಕ ಆದಾಯ 180 ಕೋಟಿ ರೂ. ತಲಪಬಹುದೆಂದು ಅಂದಾಜಿಸಲಾಗಿದೆ.