HEALTH TIPS

ವಿಧಾನಸಭಾ ಚುನಾವಣೆ; ಬೂತ್‍ಗಳ ಸಂಖ್ಯೆಯಲ್ಲಿ ಹೆಚ್ಚಳ-ಒಂದು ಬೂತ್ ನಲ್ಲಿ ಕೇವಲ 1000 ಮತದಾರರು: ಕೇಂದ್ರ ಚುನಾವಣಾ ಆಯೋಗ

    

       ತಿರುವನಂತಪುರ: ಕೊರೋನಾ ಭೀತಿಯ ಮಧ್ಯೆ ಮತದಾನ ಪ್ರಕ್ರಿಯೆಯನ್ನು ಸುಲಲಿತಗೊಳಿಸುವ ಜವಾಬ್ದಾರಿ ಹೊತ್ತಿರುವ ಭಾರತದ ಚುನಾವಣಾ ಆಯೋಗ ನವೀನ ರೀತಿಯ ಪ್ರಯೋಗಗಳಿಗೆ ಮುಂದಾಗುತ್ತಿದೆ. ಈ ನಿಟ್ಟಿನಲ್ಲಿ ಸುಲಲಿತ ಮತದಾನ ಯಾವ ಆತಂಕಗಳೂ ಇಲ್ಲದೆ ನಡೆಸಬಹುದು ಎಂದು ಕೇಂದ್ರ ಚುನಾವಣಾ ಆಯೋಗದ (ಸಿಇಸಿ) ಮುಖ್ಯಸ್ಥ ಸುನಿಲ್ ಅರೋರಾ ಹೇಳಿದ್ದಾರೆ. ಕೇರಳ ವಿಧಾನಸಭೆಯ ಅವಧಿ ಜೂನ್ 1 ಕ್ಕೆ ಕೊನೆಗೊಳ್ಳಲಿದೆ. ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ಈಗಾಗಲೇ ಪೂರ್ಣಗೊಂಡಿದೆ. ಕಳೆದ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಕೇರಳದಲ್ಲಿ ಅತಿ ಹೆಚ್ಚು ಮತದಾನವಾಗಿದೆ. ವಿದ್ಯಾರ್ಥಿಗಳ ಪರೀಕ್ಷೆ, ವಿಷು ಮತ್ತು ಈಸ್ಟರ್ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ದಿನಾಂಕಗಳನ್ನು ಘೋಷಿಸಬೇಕೆಂದು ರಾಜಕೀಯ ಪಕ್ಷಗಳು ಒತ್ತಾಯಿಸಿವೆ ಎಂದು ಅವರು ಹೇಳಿರುವರು.

        ಸೋಶಿಯಲ್ ಮೀಡಿಯಾ ಮೂಲಕ ನಕಲಿ ಅಪಪ್ರಚಾರ ವ್ಯಾಪಕವಾಗಿದೆ ಎಂಬ ದೂರುಗಳಿವೆ. ನಕಲಿ ಸುದ್ದಿಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಮೂರು ಜಿಲ್ಲೆಗಳಲ್ಲಿ ವ್ಯಾಪಕ ಕೊರೊನಾ ಭೀತಿ ಇದೆ. ಉತ್ತರದ ಜಿಲ್ಲೆಗಳು ಹೆಚ್ಚು ಸಮಸ್ಯಾತ್ಮಕವಾಗಿದೆ. ಕೊರೋನಾ ಪರಿಸ್ಥಿತಿಗೆ ಅನುಗುಣವಾಗಿ ಹೆಚ್ಚುವರಿ 15,000 ಮತದಾನ ಕೇಂದ್ರಗಳು ಇರಲಿವೆ. ಒಂದು ಬೂತ್‍ನಲ್ಲಿ ಗರಿಷ್ಠ 1000 ಮತದಾರರಿಗೆ ಮಾತ್ರ ಮತ ಚಲಾವಣೆಗೆ ಅವಕಾಶವಾಗುವ ಹೊಸ ಪ್ರಸ್ತಾವನೆಯನ್ನು ಆಯೋಗ ಚಿಂತನೆ ನಡೆಸಿದೆ. ಕೊರೋನಾ ಪಾಸಿಟಿವ್ ಮತ್ತು ಕ್ವಾರಂಟೈನ್  ಇರುವವರಿಗೆ ಕೊನೆಯ ಗಂಟೆಯವರೆಗೆ ಮತ ಚಲಾಯಿಸಲು ಅವಕಾಶವಿದೆ.  ಮಲಪ್ಪುರಂ ಲೋಕಸಭಾ ಉಪಚುನಾವಣೆ ವಿಧಾನಸಭಾ ಚುನಾವಣೆಯೊಂದಿಗೆ ನಡೆಯಲಿದೆ ಎಂದು ಸುನೀಲ್ ಅರೋರಾ ತಿರುವನಂತಪುರನಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

         ಏತನ್ಮಧ್ಯೆ, ರಾಜ್ಯ ಮುಖ್ಯ ಕಾರ್ಯದರ್ಶಿ ಬಿಸ್ವಾಸ್ ಮೆಹ್ತಾ ಮಾತನಾಡಿ, ರಾಜ್ಯವು ಯಾವುದೇ ಸಮಯದಲ್ಲಿ ಚುನಾವಣೆ ನಡೆಸಲು ಸಿದ್ಧವಾಗಿದೆ. ಚುನಾವಣಾ ಆಯೋಗದೊಂದಿಗಿನ ಸಭೆಯಲ್ಲಿ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ. ಕೊರೋನಾ ಮಾನದಂಡಗಳಿಗೆ ಅನುಗುಣವಾಗಿ ಚುನಾವಣೆ ನಡೆಯಲಿದೆ ಎಂದು ಅವರು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries