ತಿರುವನಂತಪುರ: ರಾಜ್ಯ ಸರ್ಕಾರದ 108 ಆಂಬ್ಯುಲೆನ್ಸ್ ಸೇವೆಯಲ್ಲಿ ಕರ್ತವ್ಯನ ಲೋಪದ ಕಾರಣ ಮುಖ್ಯಮಂತ್ರಿ ಮಧ್ಯಪ್ರವೇಶಿಸಿ ಗುತ್ತಿಗೆ ಕಂಪನಿಗೆ 8.7 ಕೋಟಿ ರೂ.ಗಳ ದಂಡವನ್ನು ಪಾವತಿಸಲು ತೆಗೆದುಕೊಂಡ ಕ್ರಮವನ್ನು ರದ್ದುಪಡಿಸಿದ್ದಾರೆ ಎಂದು ವರದಿಯಾಗಿದೆ. ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಂಪನಿಗೆ ದಂಡ ವಿಧಿಸಲು ಹಣಕಾಸು ಸಚಿವಾಲಯದ ಶಿಫಾರಸಿನ ಹೊರತಾಗಿಯೂ ಮುಖ್ಯಮಂತ್ರಿಯವರ ನಿರ್ಧಾರದಿಂದ ದಮಡದಿಂದ ಬಚವಾಗಲಾಗಿದೆ. 108 ಆಂಬ್ಯುಲೆನ್ಸ್ ಸೇವೆಗಳನ್ನು ನಡೆಸುತ್ತಿರುವ ಜಿವಿಕೆ ಇಎಂಆರೈ ಎಂಬ ಕಂಪನಿಗೆ ಸರ್ಕಾರ ವಿನಾಯಿತಿ ನೀಡಿದೆ.
2019 ರಲ್ಲಿ 108 ಆಂಬ್ಯುಲೆನ್ಸ್ ಸೇವೆಗಳಿಗೆ ಟೆಂಡರ್ ಪಡೆದಿದ್ದರೂ, ವಾಹನಗಳನ್ನು ನಿಯೋಜಿಸಲು, ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಮತ್ತು ಕರೆಗಳನ್ನು ತೆಗೆದುಕೊಳ್ಳಲು ಕಂಪನಿಯು ವಿಫಲವಾಗಿದೆ ಎಂದು ವೈದ್ಯಕೀಯ ಸೇವೆಗಳ ನಿಗಮ ತಿಳಿಸಿದೆ. ಇದು ಒಪ್ಪಂದದ ಉಲ್ಲಂಘನೆಯಾಗಿದೆ. ಇದಕ್ಕಾಗಿ 8.71 ಕೋಟಿ ರೂ.ಗಳ ದಂಡ ವಿಧಿಸಲು ನಿಗಮ ನಿರ್ಧರಿಸಿತ್ತು. ಆದರೆ, ಮಹಾರಾಷ್ಟ್ರದ ಪ್ರವಾಹದಿಂದಾಗಿ ಯೋಜನೆಯನ್ನು ವಿಳಂಬಗೊಳಿಸುವಂತೆ ಕಂಪನಿಯು ರಾಜ್ಯ ಸರ್ಕಾರವನ್ನು ಸಂಪರ್ಕಿಸಿತ್ತು.
ದಂಡವನ್ನು ಕಂತುಗಳಲ್ಲಿ ಪಾವತಿಸಬೇಕೆಂದು ಹಣಕಾಸು ಸಚಿವಾಲಯ ಸೂಚಿಸಿತ್ತು. ಬಳಿಕ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ದಂಡ ವಿನಾಯಿತಿ ನೀಡಲಾಗಿದೆ ಎನ್ನಲಾಗಿದೆ.ಮುಖ್ಯಮಂತ್ರಿಗಳು ಈ ಬಗ್ಗೆ ನಿರ್ಧರಿಸಲು ಕ್ಯಾಬಿನೆಟ್ ಗೆ ಚರ್ಚೆಗೆ ಬಿಟ್ಟುಕೊಟ್ಟಿದ್ದರು. ದಂಡವನ್ನು ಮನ್ನಾ ಮಾಡುವ ಕ್ಯಾಬಿನೆಟ್ ನಿರ್ಧಾರದ ಪ್ರತಿಯನ್ನು ಸ್ವೀಕರಿಸಲಾಗಿದೆ ಎಂದು ವರದಿಯಾಗಿದೆ.
ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸಬಹುದೆಂದು ಹೇಳಿದ್ದರೂ ಅದನ್ನು ರದ್ದುಗೊಳಿಸಲು ಹಣಕಾಸು ಸಚಿವಾಲಯ ಕಾನೂನು ಇಲಾಖೆಯನ್ನು ಸಂಪರ್ಕಿಸಿತ್ತು. ಆದರೆ, ಆಡಳಿತ ಮಂಡಳಿಯೊಂದಿಗೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕಾನೂನು ಇಲಾಖೆ ಸೂಚಿಸಿತ್ತು. ಈ ಬಗೆಗಿನ ದಾಖಲೆ ಪತ್ರಗಳನ್ನು ಕ್ಯಾಬಿನೆಟ್ ಚರ್ಚಿಸಿದಾಗ, ಮುಖ್ಯಮಂತ್ರಿ ಹಣಕಾಸು ಸಚಿವಾಲಯದ ಆಕ್ಷೇಪಣೆಯನ್ನು ತಿರಸ್ಕರಿಸಿದರು. ಕಂಪನಿಯ ವಿವರಣೆಯನ್ನು ಪರಿಗಣಿಸಿ ದಂಡ ವಿನಾಯ್ತಿಗೆ ನಿರ್ದೇಶಿಸಿದರು ಎಂದು ವರದಿಯಾಗಿದೆ.