ತಿರುವನಂತಪುರ: ಕೋವಿಡ್ ಕಾರಣದಿಂದ ನಿಲುಗಡೆಗೊಂಡಿದ್ದ ಮಂಗಳೂರು-ನಾಗರಕೋಯಿಲ್ ಪರಶುರಾಮ್ ಎಕ್ಸ್‍ಪ್ರೆಸ್ ಫೆಬ್ರವರಿ 11 ರಿಂದ ಪುನರಾರಂಭಗೊಳ್ಳಲಿದೆ.
ವಿಶೇಷ ರೈಲು ಸಂಚಾರ ರೂಪದಲ್ಲಿ ಸೇವೆಯನ್ನು ಪುನರಾರಂಭಿಸಲಾಗುವುದು. ಸೇವೆ ಹಳೆಯ ವೇಳಾಪಟ್ಟಿಯ ಪ್ರಕಾರ ಇರುತ್ತದೆ. ಪ್ರಯಾಣ ಟಿಕೆಟ್ ಮುಂಗಡ ಕಾಯ್ದಿರಿಸುವಿಕೆ ಈಗಾಗಲೇ ಪ್ರಾರಂಭವಾಗಿದೆ. ಮರಳುವ ವೇಳಾಪಟ್ಟಿಯಲ್ಲಿ ಪುನಲೂರು ಎಕ್ಸ್‍ಪ್ರೆಸ್ ಬುಧವಾರ ಬೆಳಿಗ್ಗೆ 5.45 ಕ್ಕೆ ಗುರುವಾಯೂರ್ ನಿಂದ ಹೊರಡಲಿದೆ.