ಕಾಸರಗೋಡು: ಪಶುಸಂಗೋಪನೆ ವಲಯ ಕಾಸರಗೋಡು ಜಿಲ್ಲೆಯಲ್ಲಿ ದೃಡ ಹೆಜ್ಜೆಯಿರಿಸಿದೆ. ಇದಕ್ಕೆ ಪೂರಕವಾಗಿ 1.21 ರೂ.ನ ಯೋಜನೆಗಳು ಕೇರಳ ಪುನರ್ ನಿರ್ಮಾಣ ಇನೀಷಿಯೇಟಿವ್ ಮೂಲಕ ಜಾರಿಗೊಂಡಿವೆ. ಹುಲ್ಲು ಉತ್ಪಾದನೆ ಹೆಚ್ಚಳಕ್ಕೆ 2.55 ಕೋಟಿ ರೂ.ನ ಯೋಜನೆಗಳು ಅನುಷ್ಠಾನಗೊಂಡಿವೆ.
ರಾಜ್ಯ ಸರಕಾರದ ಸುಭಿಕ್ಷ ಕೇರಳಂ ಯೋಜನೆಯ ಮೂಲಕ ಆಹಾರ ಬೆಳೆಗಳ ಕೃಷಿ ಪ್ರಬಲಗೊಳ್ಳುತ್ತಿರುವುದರ ಜೊತೆಗೆ ಮಾಂಸದ ಕೋಳಿ, ಮೊಟ್ಟೆ ಕೋಳಿ, ಹಾಲು ಉತ್ಪಾದನೆ, ಮೇಕೆ, ಹಸು, ಕೋಣ, ಹಂದಿ, ಮೀನು ಸಾಕಣೆ ಇತ್ಯಾದಿಗಳ ವರ್ಧನೆ ಆಹಾರ ಸುರಕ್ಷೆಗೆ ಪೂರಕವಾಗಿದೆ. ಇದಕ್ಕೆ ಪೂರಕವಾಗಿ ಗ್ರಾಮ ಪಂಚಾಯತ್ ಗಳಲ್ಲಿ/ ನಗರಸಭೆಗಳಲ್ಲಿ ಸೈರಿ ಯೂನಿಟ್ ಗಳು, ಕ್ರಾಸ್ ಬ್ರೀಡಿಂಗ್ ಹಸು ಯೂನಿಟ್ ಗಳು ಇತ್ಯಾದಿ ಆರಂಭಗೊಂಡಿವೆ. ಕೃಷಿ, ಪಶುಸಂಗೋಪನೆ ಇತ್ಯಾದಿ ವಲಯಗಳು ಹಳಬರಿಗೆ ಸೇರಿದ್ದು ಎಂದು ಮೂಗು ಮುರಿದವರು ಸಹಿತ ಈ ಕಾಲಾವಧಿಯಲ್ಲಿ ಮತ್ತೆ ಆ ವಲಯದತ್ತ ಮನ ಮಾಡತೊಡಗಿದ್ದಾರೆ. ಇದಕ್ಕೆ ಪೂರಕವಾಗಿ ಪಶುಸಂಗೋಪನೆ ಇಲಾಖೆ ಹಲವು ಯೋಜನೆಗಳನ್ನು ಸಿದ್ಧಗೊಳಿಸಿ, ಸೇವೆ ಒದಗಿಸುತ್ತಿದೆ. ಜೊತೆಗೆ ಈ ವಲಯದಲ್ಲಿ ತೊಡಗಿಕೊಂಡಿರುವ ಕೃಷಿಕರ ಮಾಹಿತಿಗಳನ್ನು "ಕೃಷಿ ನೋಂದಣಿ" ಮೂಲಕ ಸಂಗ್ರಹಿಸಲಾಗುತ್ತಿದೆ.
ರೀ ಬಿಲ್ಡ್ ಕೇರಳ ಇನೀಷಿಯೇಟಿವ್
ಪಶುಸಂಗೋಪನೆ ವಲಯದಲ್ಲಿ ಲೈವ್ಲೀ ಹುಡ್ ಸಪೆÇೀರ್ಟ್ ಪ್ಯಾಕೇಜ್ ಅಂಗವಾಗಿ 100 ಫಲಾನುಭವಿಗಳಿಗೆ ಕರು ಸಾಕಣೆ ಯೋಜನೆಗಾಗಿ 15 ಲಕ್ಷ ರೂ., 200 ಮಂದಿ ಫಲಾನುಭವಿಗಳಿಗೆ ಶುಚೀಕೃತ ಹಟ್ಟಿ ನಿರ್ಮಾಣಕ್ಕೆ 50 ಲಕ್ಷ ರೂ. 100 ಮಂದಿ ಫಲಾನುಭವಿಗಳಿಗೆ ಹುಲ್ಲು ಕೃಷಿ ಅಭಿವೃದ್ಧಿಗೆ 30 ಲಕ್ಷ ರೂ., 50 ಮಂದಿ ಫಲಾನುಭವಿಗಳಿಗೆ ಮೇಕೆ ಸಾಕಣೆ ಯೋಜನೆಗಾಗಿ 12.5 ಲಕ್ಷ ರೂ., 500 ಮಂದಿ ಫಲಾನುಭವಿಗಳಿಗೆ ಬಾತುಕೋಳಿ ಸಾಖನೆ ಯೋಜನೆಗಾಗಿ 6 ಲಕ್ಷ ರೂ., 1500 ಮಂದಿ ಫಲಾನುಭವಿಗಳಿಗೆ ಅಡುಗೆಮನೆಯಂಗಳದಲ್ಲಿ ಕೋಳಿ ಸಾಕಣೆ ಯೋಜನೆಗಾಗಿ 7.5 ಲಕ್ಷ ರೂ., ನಂತೆ ಒಟ್ಟು 1.21 ಕೋಟಿ ರೂ.ನ ಯೋಜನೆ ಸುಭಿಕ್ಷ ಕೇರಳಂ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದೆ.
ಎಲ್.ಎಸ್.ಜಿ.ಡಿ. ಯೋಜನೆಗಳು
ಹುಲ್ಲು ಬೆಳೆ ವರ್ಧನೆ ಅಂಗವಾಗಿ 2.55 ಕೋಟಿ ರೂ. ವೆಚ್ಚದಲ್ಲಿ 510 ಹಸುಗಳನ್ನು ವಿತರಣೆ ನಡೆಸಲಾಗುತ್ತಿದೆ. 208.56 ಲಕ್ಷ ರೂ. ವೆಚ್ಚದಲ್ಲಿ 2738 ಹಸುಗಳಿಗೆ ಸಬ್ಸಿಡಿ ದರದಲ್ಲಿ ಹಿಂಡಿ ವಿತರಣೆ ನಡೆಸಲಾಗುತ್ತಿದೆ. ಹುಲ್ಲು ಉತ್ಪಾದನೆಗೆ ಬೆಂಬಲ ನೀಡುವ ನಿಟ್ಟಿನಲ್ಲಿ 45 ಲಕ್ಷ ರೂ. ವೆಚ್ಚದಲ್ಲಿ ಹಾಲು ಉತ್ಪಾದನೆಗೆ ಸಬ್ಸಿಡಿ ಯೋಜನೆ ಜಾರಿಗೊಳಿಸಲಾಗಿದೆ. ಮಾಂಸೋತ್ಪಾದನೆ ಹೆಚ್ಚಳಕ್ಕಾಗಿ 86.7 ಲಕ್ಷ ರೂ. ವೆಚ್ಚದಲ್ಲಿ 867 ಮೇಕೆಗಳ ವಿತರಣೆ ನಡೆಸಲಾಗುತ್ತಿದೆ. ಮೊಟ್ಟೆ ಉತ್ಪಾದನೆ ಹೆಚ್ಚಳದ ಅಂಗವಾಗಿ 128.98 ಲಕ್ಷ ರೂ. ವೆಚ್ಚದಲ್ಲಿ 117260 ಮೊಟ್ಟೆ ಕೋಳಿಗಳ ವಿತರಣೆ ನಡೆಸಲಾಗಿದೆ.
ಮೇಕೆ ಸಾಕಣೆ ಯೋಜನೆ, ಮಹಿಳೆಯರಿಗಾಗಿ ಹೆಣ್ಣು ಮೇಕೆಗಳ ಸಾಕಣೆ, ಗೋಟ್ ಸಾಟಲೈಟ್ ಯೋಜನೆ, ಹಸು ಸಾಕಣೆ, ಕೇರಳ ಚಿಕನ್ ಯೋಜನೆ, ಕೇರಳ ಚಿಕನ್ ಔಟ್ ಲೆಟ್, ಚೆಂಗಳದಲ್ಲಿ ಮೊದಲ ಫಾರಂ, ಕಿನಾನೂರು ಗ್ರಾಮದಲ್ಲಿ ತ್ಯಾಜ್ಯ ಸಮಸ್ಕರಣೆ ಘಟಕ ಆರಂಭ ಇತ್ಯಾದಿಗಳು ಯೋಜನೆಯ ಅಂಗವಾಗಿ ಜಾರಿಗೊಳ್ಳಲಿವೆ.