ಕೋಝಿಕ್ಕೋಡ್: ದಕ್ಷಿಣ ರೈಲ್ವೆಯ ಮೊದಲ ಕ್ಲೋನ್ ರೈಲು ಸೇವೆ ಪ್ರಾರಂಭವಾಗಲಿದೆ. ಎರ್ನಾಕುಳಂ-ಓಖಾ ರೈಲು ಮಾರ್ಗದಲ್ಲಿ ಫೆಬ್ರವರಿ 14 ರಿಂದ ಸೇವೆ ಪ್ರಾರಂಭಿಸಲಿದೆ.
ಕ್ಲೋನ್ ರೈಲಿನಲ್ಲಿನ ಟಿಕೆಟ್‍ಗಳು ಇತರ ಸೇವೆಗಳಿಗಿಂತ ಹೆಚ್ಚು ದುಬಾರಿಯಾಗಿದೆ. ಇತರ ಸೇವೆಗಳಿಗಿಂತ ರೈಲಿನ ವೇಗವೂ ಹೆಚ್ಚಿರುತ್ತದೆ. ನಿಲ್ದಾಣಗಳು ಕಡಿಮೆ ಇರುತ್ತದೆ. ದೇಶದ ಮೊದಲ ಕ್ಲೋನ್ ರೈಲು ಕಳೆದ ವರ್ಷ ಸೆಪ್ಟೆಂಬರ್ 21 ರಂದು ಪ್ರಾರಂಭಗೊಂಡಿತ್ತು.
ಕ್ಲೋನ್ ರೈಲುಗಳಲ್ಲಿ ಟಿಕೆಟ್ ಮುಂಗಡ ಕಾಯ್ದಿರಿಸುವಿಕೆಗಳು ಪ್ರಯಾಣಕ್ಕಿಂತ 10 ದಿನಗಳ ಮೊದಲು ನಡೆಸಬೇಕಾಗುತ್ತದೆ. ಈ ರೈಲು ಫೆಬ್ರವರಿ 14,21,28 ಮತ್ತು ಮಾರ್ಚ್ 7,11,18,25 ರಂದು ರಾತ್ರಿ 7.35 ಕ್ಕೆ ಎರ್ನಾಕುಳಂ ಜಂಕ್ಷನ್‍ನಿಂದ ಹೊರಡಲಿದೆ. ರೈಲು ಮೂರನೇ ದಿನ ಸಂಜೆ 4.40 ಕ್ಕೆ ಓಖಾ ತಲುಪಲಿದೆ. ಮರಳಿ ರೈಲು ಫೆಬ್ರವರಿ 17, 24, ಮಾರ್ಚ್ 3, 10, 17, 24, 31 ಮತ್ತು ಏಪ್ರಿಲ್ 7, 14, 21 ಮತ್ತು 28 ರಂದು ಬೆಳಿಗ್ಗೆ 6.45 ಕ್ಕೆ ಓಖಾ ಜಂಕ್ಷನ್‍ನಿಂದ ಹೊರಟು ಮರುದಿನ ಬೆಳಿಗ್ಗೆ 11.55 ಕ್ಕೆ ಎರ್ನಾಕುಳಂ ಜಂಕ್ಷನ್‍ಗೆ ತಲುಪುತ್ತದೆ.
ಕೇರಳದಲ್ಲಿ, ಈ ರೈಲಿಗೆ ಆಲುವಾ, ತ್ರಿಶೂರ್, ಶೋರ್ನೂರ್, ಪಟ್ಟಾಂಬಿ, ಕುಟ್ಟಿಪುರಂ, ತಿರೂರು, ಪರಪ್ಪನಂಗಾಡಿ, ಫೆರೂಕ್, ಕೋಝಿಕ್ಕೋಡ್, ಕೊಯಿಲಾಂಡಿ, ವಡಗರ, ತಲಶ್ಚೇರಿ, ಕಣ್ಣೂರು, ಪಯ್ಯನ್ನೂರು, ಕಾಞಂಗಾಡ್ ಮತ್ತು ಕಾಸರಗೋಡುಗಳಲ್ಲಿ ನಿಲ್ದಾಣಗಳನ್ನು ಹೊಂದಿದೆ.
ಕ್ಲೋನ್ ರೈಲುಗಳೆಂದರೆ........
ಭಾರತೀಯ ರೈಲ್ವೆ ನೆಟ್‍ವರ್ಕ್‍ನಲ್ಲಿ ಈಗಾಗಲೇ ಚಾಲನೆಯಲ್ಲಿರುವ ಐ.ಆರ್.ಸಿ.ಟಿ.ಸಿ ವಿಶೇಷ ರೈಲುಗಳ ಸೀಮಿತ ನಿಲುಗಡೆಗಳು ಮಾತ್ರವಿರುವ ವೇಗವಾಗಿ ಸಾಗುವ ಸಮಯವನ್ನು ಆಧರಿಸಿ ಕ್ಲೋನ್ ರೈಲುಗಳಿರುತ್ತವೆ. ಹೆಸರೇ ಸೂಚಿಸುವಂತೆ, ಈ ತದ್ರೂಪಿ ರೈಲುಗಳು ಒಂದು ಮಾರ್ಗದಲ್ಲಿನ ಮೂಲ ರೈಲುಗಳ ಪ್ರತಿರೂಪವಾಗಿದ್ದು, ಪ್ರಯಾಣಿಕರಿಂದ ಹೆಚ್ಚಿನ ಬೇಡಿಕೆಯನ್ನು ಪೂರೈಸುವ ಗುರಿಯನ್ನು ಹೊಂದಿದೆ.
ಕ್ಲೋನ್ ರೈಲುಗಳು ಪ್ರಾಥಮಿಕವಾಗಿ 3 ಎಸಿ ರೈಲು ಸೇವೆಗಳಾಗಿರುತ್ತವೆ ಮತ್ತು ಭಾರತೀಯ ರೈಲ್ವೆಯಿಂದ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ವಿಶೇಷ ರೈಲುಗಳಿಗಿಂತ ಮುಂದಿದೆ. ಹೆಚ್ಚಿನ ಪೆÇ್ರೀತ್ಸಾಹ ಮತ್ತು ಬೇಡಿಕೆಯನ್ನು ಹೊಂದಿರುವ ರೈಲ್ವೆ ಮಾರ್ಗಗಳಲ್ಲಿ ಈ ಕ್ಲೋನ್ ರೈಲುಗಳನ್ನು ಕಾರ್ಯಗತಗೊಳಿಸಲಾಗುವುದು ಎಂದು ಅಧಿಕೃತರು ತಿಳಿಸುತ್ತಾರೆ. ಅಸ್ತಿತ್ವದಲ್ಲಿರುವ ವಿಶೇಷ ರೈಲುಗಳಿಗಿಂತ ಕ್ಲೋನ್ ರೈಲುಗಳ ವೇಗ ಹೆಚ್ಚಿರುತ್ತದೆ. ಈ ಕ್ಲೋನ್ ರೈಲುಗಳ ಮುಂಗಡ ಕಾಯ್ದಿರಿಸುವಿಕೆ ಅವಧಿ (ಎಆರ್‍ಪಿ) 10 ದಿನಗಳಾಗಿವೆ.