ಮಲಪ್ಪುರಂ: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳದ ಮಧ್ಯೆ ಮಲಪ್ಪುರಂನ ಪೆÇನ್ನಾನಿ ಮಾರಂಚೇರಿ ಸರ್ಕಾರಿ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕೋವಿಡ್ ಬಾಧಿಸಿರುವುದು ಕಳವಳಕಾರಿಯಾಗುತ್ತಿದೆ. ಈ ಶಾಲೆಯ 150 ಮಂದಿ ವಿದ್ಯಾರ್ಥಿಗಳು ಮತ್ತು 34 ಶಿಕ್ಷಕರಿಗೆ ಭಾನುವಾರ(ಇಂದು) ಕೋವಿಡ್ ದೃಢಪಡಿಸಲಾಗಿದೆ.
ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ರೋಗ ಪತ್ತೆಯಾದ ಬೆನ್ನಿಗೆ ಶಾಲೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು. ಒಬ್ಬ ವಿದ್ಯಾರ್ಥಿಯಲ್ಲಿ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಇತರ ವಿದ್ಯಾರ್ಥಿಗಳ ಮೇಲೆ ನಡೆಸಿದ ಪರೀಕ್ಷೆಗಳಲ್ಲಿ ಹೆಚ್ಚಿನ ಮಂದಿಗೆ ಕೋವಿಡ್ ಕಂಡುಬಂದಿದೆ. ಕೋವಿಡ್ ಬಾಧಿಸಿದ ವಿಸದ್ಯಾರ್ಥಿಗಳೆಲ್ಲ 10 ನೇ ತರಗತಿ ವಿದ್ಯಾರ್ಥಿಗಳಾಗಿದ್ದಾರೆ.
ಸೋಂಕು ಬಾಧಿತ ಯಾವುದೇ ವಿದ್ಯಾರ್ಥಿಗಳಲ್ಲಿ ಕೋವಿಡ್ ಲಕ್ಷಣಗಳಿಲ್ಲ ಎಂದು ವರದಿಯಾಗಿದೆ. ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳು ಸಹ ಅದೇ ಶಾಲೆಯಲ್ಲಿ ಓದುತ್ತಿದ್ದಾರೆ. ಅವರನ್ನು ಇನ್ನೂ ಪರೀಕ್ಷಿಸಲಾಗಿಲ್ಲ. ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಹೈಯರ್ ಸೆಕೆಂಡರಿಯ ಶಿಕ್ಷಕರು, ವಿದ್ಯಾರ್ಥಿಗಳನ್ನೂ ಇನ್ನು ಪರಿಶೀಲನೆಗೊಳಪಡಿಸಲು ಸೂಚಿಸಲಾಗಿದೆ.
ಶಾಲೆಯ ವಿದ್ಯಾರ್ಥಿಗಳಿಗೆ ಸಂಪರ್ಕತಡೆಗೆ ಹೋಗಲು ಸೂಚನೆ ನೀಡಲಾಗಿದೆ. ತ್ರಿಶೂರ್ ಪ್ರದೇಶದ ವಿದ್ಯಾರ್ಥಿಗಳೂ ಇದೇ ಶಾಲೆಯಲ್ಲಿ ಓದುತ್ತಿದ್ದಾರೆ. ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಅನುಸರಿಸಿ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದರು. ಎಷ್ಟು ಜನರು ಒಟ್ಟಿಗೆ ಸೋಂಕಿಗೆ ಒಳಗಾಗಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಏತನ್ಮಧ್ಯೆ, ಕೇರಳದಲ್ಲಿ ಭಾನುವಾರ 6075 ಮಂದಿಗೆ ಸೋಂಕು ದೃಢಪಡಿಸಲಾಗಿದೆ. ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 5948 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ಇದರೊಂದಿಗೆ 67,650 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕೃತರು ತಿಳಿಸಿದ್ದಾರೆ. ಈವರೆಗೆ 8,96,668 ಮಂದಿ ಜನರು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.