HEALTH TIPS

ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಪಿಂಚಣಿ 1500 ರೂ.ಗಳಿಂದ 1600 ರೂ.ಗೆ ಏರಿಕೆ- ಹಣಕಾಸು ಸಚಿವಾಲಯದಿಂದ ಆದೇಶ

  

          ತಿರುವನಂತಪುರ: ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಪಿಂಚಣಿಗಳನ್ನು ರಾಜ್ಯ ಹಣಕಾಸು ಇಲಾಖೆ ಹೆಚ್ಚಿಸಿ ಆದೇಶ ನೀಡಿದೆ. ಪ್ರಸ್ತುತ  1500 ರೂ. ಇದ್ದ ಪಿಂಚಣಿ  1600 ರೂ.ಗೆ ಹೆಚ್ಚಿಸಲಾಗಿದೆ.

           ಬಜೆಟ್‍ನಲ್ಲಿ ಘೋಷಿಸಿದ ಪಿಂಚಣಿ ಹೆಚ್ಚಳ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ ಎಂದು ಸರ್ಕಾರ ಹೇಳಿದೆ. ಚುನಾವಣಾ ನೀತಿ ಸಂಹಿತೆಯಲ್ಲಿ ಸಿಲುಕಿಕೊಳ್ಳದಂತೆ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಸರ್ಕಾರಿ ನೌಕರರು ಮತ್ತು ಶಿಕ್ಷಕರಿಗೆ 4 ಕಂತುಗಳಲ್ಲಿ ಶೇ. 16 ಡಿಎ (ಕ್ಷಾಮ ಭತ್ಯೆ) ಯನ್ನೂ ಹಣಕಾಸು ಸಚಿವಾಲಯ ಮಂಜೂರು ಮಾಡಿದೆ. ಇದೂ ಏಪ್ರಿಲ್‍ನಿಂದ ಲಭ್ಯವಾಗಲಿದೆ. 

       2019 ರ ಜನವರಿ 1 ರಂದು ಶೇ.3, 2019 ರ ಜುಲೈ 1 ರಂದು ಶೇ.5, 2020ರ ಜನವರಿ 1 ರಂದು ಶೇ.4 ಮತ್ತು 2020 ರ ಜುಲೈ 1 ರಂದು ಶೇ.4 ಡಿ.ಎ. ಮಂಜೂರಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries