ಕಾಸರಗೋಡು: ಕಾಸರಗೋಡು ಜಿಲ್ಲೆಯ ಪ್ರಥಮ ನೌಕರಿ ಕುಶಲತೆ ತರಬೇತಿ ಕೇಂದ್ರ ಬೇಡಡ್ಕದಲ್ಲಿ ನಿರ್ಮಾಣಗೊಳ್ಳಲಿದ್ದು, 17ರಂದು ನಿರ್ಮಾಣಕ್ಕೆ ಚಾಲನೆ ಲಭಿಸಲಿದೆ.
ಅಂದು ಮಧ್ಯಾಹ್ನ 12.30ಕ್ಕೆ ನಡೆಯುವ ಸಮಾರಂಭದಲ್ಲಿ ನೌಕರಿ ಸಚಿವ ಟಿ.ಪಿ.ರಾಮಕೃಷ್ಣನ್ ವೀಡಿಯೋ ಕಾನ್ ಫೆರೆನ್ಸ್ ಮೂಲಕ ನಿರ್ಮಾಣ ಚಟುವಟಿಕೆಗಳಿಗೆ ಚಾಲನೆ ನೀಡುವರು. ಶಾಸಕ ಕೆ.ಕುಂuಟಿಜeಜಿiಟಿeಜರಾಮನ್ ಅಧ್ಯಕ್ಷತೆ ವಹಿಸುವರು.
ನೌಕರಿ ನೈಪುಣ್ಯ ವಿವಿಧ ಹಂತಗಳಲ್ಲಿ ಗ್ರಾಮೀಣ ವಲಯಕ್ಕೂ ತಲಪಿಸುವ ಉದ್ದೇಶದಿಂದ ರಾಜ್ಯ ನೌಕರಿ ಇಲಾಖೆ ವತಿಯಿಂದ ಈ ಕೇಂದ್ರ ನಿರ್ಮಾಣಗೊಳ್ಳಲಿದೆ. ಬೇಡಡ್ಕ ಗ್ರಾಮ ಪಂಚಾಯತ್ ನ ಕುಂಡಂಕುಳಿ ಅಪ್ಪಾರನ್ ಪಾರ್ಕ್ ಕಟ್ಟಡದ ಪ್ರಥಮ ಅಂತಸ್ತಿನಲ್ಲಿ ಈ ಕೇಂದ್ರ ಚಟುವಟಿಕೆ ನಡೆಸಲಿದೆ. ರಾಜ್ಯ ಸರಕಾರ ಈ ಸಂಸ್ಥೆಗಾಗಿ 50 ಲಕ್ಷ ರೂ. ಮಂಜೂರು ಮಾಡಿದೆ.