ತಿರುವನಂತಪುರ: ರಾಜ್ಯದ ಪ್ರಮುಖ ವೈದ್ಯಕೀಯ ಕಾಲೇಜುಗಳು ಮತ್ತು ಜಿಲ್ಲಾ ಮಟ್ಟದಲ್ಲಿರುವ ಮುಖ್ಯ ಆಸ್ಪತ್ರೆಗಳ ಅಭಿವೃದ್ದಿಗಾಗಿ 1107 ಕೋಟಿ ರೂ.ಗಳನ್ನು ಕಿಪ್ಬಿ ಅನುಮೋದಿಸಿರುವುದಾಗಿ ಆರೋಗ್ಯ ಸಚಿವೆ ಕೆ.ಕೆ. ಶೈಲಜೆ ನಿನ್ನೆ ತಿಳಿಸಿದ್ದಾರೆ.
ತಿರುವನಂತಪುರಂನ ಜನರಲ್ ಆಸ್ಪತ್ರೆ ಅಭಿವೃದ್ದಿಗೆ 137.28 ಕೋಟಿ ರೂ., ಕೊಲ್ಲಂ ಜಿಲ್ಲಾಸ್ಪತ್ರೆಗೆ 104.49 ಕೋಟಿ ರೂ., ತ್ರಿಶೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ 153.25 ಕೋಟಿ, ಕಣ್ಣೂರು ತಲಶ್ಚೇರಿ ಮಲಬಾರ್ ಕ್ಯಾನ್ಸರ್ ಸೆಂಟರ್ ಗೆ 344.81 ಕೋಟಿ, ಕಣ್ಣೂರು ತಲಶ್ಚೇರಿ ಮಹಿಳೆಯರು ಮತ್ತು ಮಕ್ಕಳ ಆಸ್ಪತ್ರೆಗೆ 53.66 ಕೋಟಿ ರೂ, ಕಾಸರಗೋಡಿನ ಬೇಡಡ್ಕ ತಾಲೂಕು ಆಸ್ಪತ್ರೆಗೆ 10.17 ಕೋಟಿ ರೂ, ಚೇಧರ್ತಲ ತಾಲೂಕು ಆಸ್ಪತ್ರೆಗೆ 61.53 ಕೋಟಿ ರೂ., ಇರಿಟ್ಟಿ ತಾಲೂಕು ಆಸ್ಪತ್ರೆಗೆ 49.71, ಕಾಸರಗೋಡು ನೀಲೇಶ್ವರ ತಾಲೂಕು ಆಸ್ಪತ್ರೆಗೆ 9.98 ಕೋಟಿ, ಪಾಲಕ್ಕಾಡ್ ಜಿಲ್ಲಾ ಆಸ್ಪತ್ರೆ 72.38 ಕೋಟಿ, ವರ್ಕಲಾ ತಾಲ್ಲೂಕು ಆಸ್ಪತ್ರೆ 33.26 ಕೋಟಿ, ಮಲಪ್ಪುರಂ ಪೊನ್ನಾನಿ ತಾಲೂಕು ಆಸ್ಪತ್ರೆಗೆ 9.06 ಕೋಟಿ, ತಿರುರಂಗಾಡಿ ತಾಲೂಕು ಆಸ್ಪತ್ರೆಗೆ 10.42 ಕೋಟಿ, ಕಾಸರಗೋಡು ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ 13.73, ಪಾಲಕ್ಕಾಡ್ ಪಟ್ಟಾಂಗವಿ ತಾಲೂಕು ಆಸ್ಪತ್ರೆಗೆ 9.89, ಅಲತೂರ್ ತಾಲ್ಲೂಕು ಆಸ್ಪತ್ರೆ 11.03, ಮನ್ನಾರ್ ತಾಲೂಕು ಪ್ರಧಾನ ಆಸ್ಪತ್ರೆಗೆ 10.47 ಕೋಟಿ, ಒಟ್ಟಪಾಲಂ ಪ್ರಧಾನ ಆಸ್ಪತ್ರೆಗೆ 11.35 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.