ಡೆಹ್ರಾಡೂನ್: ಚಳಿಗಾಲದ ವಿರಾಮದ ಬಳಿಕ ಬದರಿನಾಥ ದೇವಾಲಯದ ದ್ವಾರಗಳನ್ನು ಮೇ 18ರಂದು ಭಕ್ತಾಧಿಗಳಿಗಾಗಿ ತೆರೆಯಲಾಗುವುದು.
'ಉತ್ತರಾಖಂಡ ಚಮೋಲಿ ಜಿಲ್ಲೆಯಲ್ಲಿರುವ ಬದರಿನಾಥ ದೇವಾಲಯವು ಚಳಿಗಾಲದ ವಿರಾಮದಿಂದಾಗಿ ಮುಚ್ಚಲ್ಪಟ್ಟಿತ್ತು. ಭಕ್ತರಿಗಾಗಿ ಮೇ 18 ರಂದು ಬೆಳಿಗ್ಗೆ 4.15 ಕ್ಕೆ ದೇವಾಲಯದ ದ್ವಾರಗಳನ್ನು ತೆರೆಯಲಾಗುವುದು' ಎಂದು ಚಾರ್‌ಧಾಮ್ ದೇವಸ್ಥಾನಂ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.
'ಮಂಗಳವಾರ ತೆಹ್ರಿ ಮಹಾರಾಜರ ನರೇಂದ್ರ ಅರಮನೆಯಲ್ಲಿ ವಸಂತ ಪಂಚಮಿಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಈ ದಿನಾಂಕವನ್ನು ನಿಗದಿ ಮಾಡಲಾಗಿದೆ' ಎಂದು ಅವರು ಹೇಳಿದರು.
ಕಳೆದ ವರ್ಷ ಕೊರೊನಾ ಸೋಂಕಿನ ಕಾರಣ ದೇವಸ್ಥಾನವನ್ನು ಪುನಃ ತೆರೆಯುವುದು ಇನ್ನಷ್ಟು ವಿಳಂಬವಾಗಿತ್ತು.