ಮಂಗಳೂರು: ಮತ್ತೆ ಹೆಚ್ಚುತ್ತಿರುವ ಕೊರೋನಾ ಸೋಂಕು ನಿಯಂತ್ರಿಸಲು ಕುವೈತ್ ಸರ್ಕಾರ ಭಾರತ ಸೇರಿದಂತೆ 20 ದೇಶಗಳ ನಾಗರಿಕರ ಪ್ರವೇಶವನ್ನು ಎರಡು ವಾರಗಳವರೆಗೆ ನಿಷೇಧಿಸಿದ್ದು, ನೂರಾರು ಭಾರತೀಯರು ದುಬೈನಲ್ಲಿ ಸಿಲುಕಿದ್ದಾರೆ.
ಹೊಸ ನಿಷೇಧ ಕ್ರಮ ಭಾನುವಾರದಿಂದ ಜಾರಿಗೆ ಬರಲಿದ್ದು, ಮೆಡಿಕಲ್ ಶಾಪ್ ಮತ್ತು ದಿನಸಿ ಅಂಗಡಿಗಳ ಕೆಲಸವನ್ನು ಹೊರತುಪಡಿಸಿ, ರಾತ್ರಿ 0800 ರಿಂದ 0500 ರವರೆಗೆ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ.
ಸಾರ್ವಜನಿಕ ಸಭೆಗಳು, ಫಿಟ್‍ನೆಸ್ ಕೇಂದ್ರಗಳು ಮತ್ತು ಹೇರ್ ಸಲೂನ್‍ಗಳ ಕೆಲಸ ಮತ್ತು ಕ್ರೀಡಾಕೂಟಗಳನ್ನು ಸಹ ನಿಷೇಧಿಸಲು ಕುವೈತ್ ಸರ್ಕಾರ ನಿರ್ಧರಿಸಿದೆ. ಕುವೈತ್ ಸರ್ಕಾರದ ಈ ದಿಢೀರ್ ನಿರ್ಧಾರದಿಂದ ದುಬೈನಲ್ಲಿ ತಮ್ಮ 14 ದಿನಗಳ ಕ್ವಾರಂಟೈನ್ ಮುಗಿಸಲು ಉತ್ಸುಕರಾಗಿದ್ದ ಸೌದಿ ಮೂಲದ ಭಾರತೀಯರು ಈಗ ಅನಿಶ್ಚಿತತೆ ಎದುರಿಸುತ್ತಿದ್ದಾರೆ.ದುಬೈನಲ್ಲಿ 14 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ ಹಲವರು ದಿಢೀರ್ ನಿಷೇಧದಿಂದಾಗಿ ಸೌದಿ ಅರೇಬಿಯಾಕ್ಕೆ ಪ್ರಯಾಣ ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಎಂದು ರಿಯಾದ್‍ನ ವಕೀಲ ಮತ್ತು ಸಮಾಜ ಸೇವಕ ಪಿ.ಎ.ಹಮೀದ್ ಅವರು ಹೇಳಿದ್ದಾರೆ.
ದುಬೈನಲ್ಲಿ ಸಿಲುಕಿದ ಹೆಚ್ಚಿನ ಭಾರತೀಯರು ದುಬೈನಲ್ಲಿ ವಿಸ್ತೃತ ವಾಸ್ತವ್ಯವನ್ನು ಪಡೆಯಲು ಸಾಧ್ಯವಾಗದ ಬ್ಲೂ ಕಾಲರ್ ಉದ್ಯೋಗಿಗಳಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.