ನವದೆಹಲಿ: ಕೋವಿಡ್-19 ಲಸಿಕೆ ಪಡೆದ ಸುಮಾರು ಶೇ. 97 ರಷ್ಟು ಫಲಾನುಭವಿಗಳು ತೃಪ್ತಿದಾಯಕ ಅನುಭವವಾಗಿರುವುದಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ. ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಕೋವಿಡ್ ಲಸಿಕೆ ನೀಡಿರುವ ಮಧ್ಯಪ್ರದೇಶ ರಾಜ್ಯವನ್ನು ಕೇಂದ್ರ ಸರ್ಕಾರ ಹೊಗಳಿದೆ.
ಈವರೆಗೂ ದೇಶದಲ್ಲಿ ಒಟ್ಟಾರೇ 45,93,427 ಡೋಸ್ ಗಳನ್ನು ನೀಡಲಾಗಿದ್ದು, ಫೆಬ್ರವರಿ 13ರಿಂದ ಎರಡನೇ ಹಂತದ ಲಸಿಕೆ ವಿತರಣೆ ಕಾರ್ಯಕ್ರಮ ಆರಂಭವಾಗಲಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ವೇಗವಾಗಿ 4 ಮಿಲಿಯನ್ ಮಂದಿ ಕೋವಿಡ್ 19 ಲಸಿಕೆ ಪಡೆದ ರಾಷ್ಟ್ರ ಭಾರತವಾಗಿದ್ದು, ಕೇವಲ 18 ದಿನಗಳಲ್ಲಿ ವೇಗವಾಗಿ 4 ಮಿಲಿಯನ್ ಜನರು ಲಸಿಕೆಯನ್ನು ಪಡೆದುಕೊಂಡಿದ್ದಾರೆ ಎಂದು ಅವರು ಹೇಳಿದರು.ದೇಶಾದ್ಯಂತ ಮೊದಲ ಹಂತದ ಲಸಿಕೆ ವಿತರಣೆ ಅಭಿಯಾನದಡಿ 1239 ಖಾಸಗಿ ಸ್ಥಳಗಳು ಹಾಗೂ 5,912 ಸಾರ್ವಜನಿಕ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗಿದೆ. ಲಸಿಕೆ ಪಡೆದ ನಂತರ ಕೋವಿನ್ ಪೆÇೀರ್ಟಲ್ ಮೂಲಕ ಎಸ್ ಎಂಎಸ್ ಮೂಲಕ ಪ್ರತಿಕ್ರಿಯೆ ನೀಡುವಂತೆ ಸೂಚಿಸಲಾಗಿತ್ತು. 5,12,128 ಮಂದಿ ಪ್ರತಿಕ್ರಿಯಿಸಿದ್ದು, ಅವರಲ್ಲಿ ಶೇ. 97 ರಷ್ಟು ಮಂದಿ ಲಸಿಕೆ ಅನುಭವದೊಂದಿಗೆ ತೃಪ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಮಾಹಿತಿಗಳ ಪ್ರಕಾರ, ಮಧ್ಯಪ್ರದೇಶದಲ್ಲಿ ಶೇ. 73ಕ್ಕೂ ಹೆಚ್ಚು, ರಾಜಸ್ಥಾನದಲ್ಲಿ ಸುಮಾರು ಶೇ. 66 ರಷ್ಟು ಮಂದಿ ಲಸಿಕೆ ಪಡೆದಿದ್ದರೆ, ತಮಿಳುನಾಡಿನಲ್ಲಿ ಕೇವಲ ಶೇ. 23 ಮಂದಿ ಲಸಿಕೆ ಸ್ವೀಕರಿಸಿದ್ದಾರೆ. 50 ವರ್ಷಕ್ಕೂ ಮೇಲ್ಪಟ್ಟ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಇದರಲ್ಲಿ 60 ವರ್ಷಕ್ಕೂ ಮೇಲ್ಪಟ್ಟ ಉಪ ಗುಂಪೆÇಂದು ಇರುವುದಾಗಿ ಆರೋಗ್ಯ ಕಾರ್ಯದರ್ಶಿ ತಿಳಿಸಿದರು.
ಕಳೆದ ಮೂರು ವಾರಗಳಲ್ಲಿ ದೇಶದಲ್ಲಿನ 251 ಜಿಲ್ಲೆಗಳಲ್ಲಿ ಯಾವುದೇ ಹೊಸ ಕೋವಿಡ್ -19 ಸೋಂಕು ಹಾಗೂ ಸಾವಿನ ಪ್ರಕರಣಗಳು ಸಂಭವಿಸಿಲ್ಲ ಎಂದು ರಾಜೇಶ್ ಭೂಷಣ್ ಹೇಳಿದರು.