ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕೇರಳಕ್ಕೆ 65,000 ಕೋಟಿ ರೂ. ಮೀಸಲಿರಿಸಿದೆ. ಕೇರಳದಲ್ಲಿ ಹಾದುಹೋಗುವ 1100 ಕಿ.ಮೀ ಎನ್‍ಎಚ್ ಯೋಜನೆಗೆ 65,000 ಕೋಟಿ ರೂ. ಇರಲಿದೆ. ಇದರಲ್ಲಿ 600 ಕಿ.ಮೀ ಮುಂಬೈ-ಕನ್ಯಾಕುಮಾರಿ ಕಾರಿಡಾರ್ ನಿರ್ಮಾಣ ಉದ್ದೇಶಿಸಲಾಗಿದೆ.
ಕೊಚ್ಚಿ ಮೆಟ್ರೊಗೆ 1957 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. 11.5 ಕಿ.ಮೀ ಕೊಚ್ಚಿ ಮೆಟ್ರೊದ ಎರಡನೇ ಹಂತದ ಕಾಮಗಾರಿಗೆ ಕೇಂದ್ರ ಹಂಚಿಕೆ `1957.05 ಕೋಟಿ. ನೀಡಲಿದೆ. ಕೊಚ್ಚಿ ಬಂದರನ್ನೂ ಅಭಿವೃದ್ಧಿಪಡಿಸಲಾಗುವುದು.
ತಮಿಳುನಾಡಿನಲ್ಲಿ 3500 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 1.03 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ಇದು ಮಧುರೈ-ಕೊಲ್ಲಂ ಕಾರಿಡಾರ್ ಅನ್ನು ಒಳಗೊಂಡಿದೆ. ಮುಂದಿನ ವರ್ಷ ರಸ್ತೆ ನಿರ್ಮಾಣ ಪ್ರಾರಂಭವಾಗಲಿದೆ. 675 ಕಿ.ಮೀ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕಾಗಿ ಪಶ್ಚಿಮ ಬಂಗಾಳಕ್ಕೆ 25,000 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ಕೋಲ್ಕತಾ-ಸಿಲಿಗುರಿ ರಸ್ತೆಯ ನವೀಕರಣಕ್ಕಾಗಿ ಈ ಮೊತ್ತವನ್ನು ಘೋಷಿಸಲಾಗಿದೆ. ರಸ್ತೆ ಸಾರಿಗೆ ಸಚಿವಾಲಯದ ಬಜೆಟ್‍ನಲ್ಲಿ 1.8 ಲಕ್ಷ ಕೋಟಿ ರೂ.ಮೀಸಲಿರಿಸಲಾಗಿದೆ.