ವುಹಾನ್: ಚೀನಾಕ್ಕೆ ಭೇಟಿ ನೀಡಿರುವ ಡಬ್ಲ್ಯೂಎಚ್ ಒ ತಂಡ ಕೊರೋನಾವೈರಸ್ ಮೂಲವನ್ನು ಕಂಡುಹಿಡಿಯುವಲ್ಲಿ ವಿಫಲರಾಗಿದ್ದಾರೆ ಎಂದು ವಿಜ್ಞಾನಿಗಳು ಮಂಗಳವಾರ ಹೇಳಿದ್ದಾರೆ.
ವಿಶ್ವದಾದ್ಯಂತ 2.3 ಮಿಲಿಯನ್ ಜನರ ಸಾವಿಗೆ ಕಾರಣವಾಗಿರುವ ಕೊರೋನಾ ವೈರಸ್ ಬಾವಲಿಗಳಲ್ಲಿ ಹುಟ್ಟಿಕೊಂಡಿದ್ದು, ಇತರ ಪ್ರಾಣಿಗಳ ಮೂಲಕ ಮಾನವರಿಗೆ ಹರಡಿದೆ ಎಂಬುದು ತಜ್ಞರ ನಂಬಿಕೆಯಾಗಿದೆ.ಇತ್ತೀಚಿನ ವುಹಾನ್ ಭೇಟಿ ವೇಳೆಯಲ್ಲಿ ಯಾವುದೇ ಹೊಸ ವಿಚಾರ ತಿಳಿದುಬರಲಿಲ್ಲ. ಆದರೆ, ಕೋವಿಡ್-19 ಸಾಂಕ್ರಾಮಿಕದ ಸ್ಥಿತಿಯಲ್ಲಿ ಗಣನೀಯ ಪ್ರಮಾಣದಲ್ಲಿ ಬದಲಾವಣೆಯಾಗಿಲ್ಲ ಎಂದು ಡಬ್ಲ್ಯೂಎಚ್ ಒ ವಿಜ್ಞಾನಿ ಬೆನ್ ಎಂಬಾರೆಕ್ ಹೇಳಿದ್ದಾರೆ.
ಡಿಸೆಂಬರ್ 2019ಕ್ಕೂ ಮುಂಚೆ ವುಹಾನ್ ನಿಂದ ಕೋವಿಡ್-19 ಸಾಂಕ್ರಾಮಿಕ ರೋಗ ಹರಡಿದೆ ಎಂಬುದನ್ನು ಪುಷ್ಟೀಕರಿಸುವ ಯಾವುದೇ ಸಾಕ್ಷ್ಯಧಾರಗಳು ವುಹಾನ್ ಅಥವಾ ಚೀನಾದ ಎಲ್ಲಿಯೂ ಸಿಕಿಲ್ಲ ಎಂದು ಬೆನ್ ಎಂಬಾರೆಕ್ ತಿಳಿಸಿದ್ದಾರೆ.