HEALTH TIPS

ಕೋವಿಡ್ 19 ರೋಗಿಗಳಿಗೆ ಕ್ಷಯರೋಗ ಕಾಡುವ ಅಪಾಯವಿದೆ: ರಷ್ಯಾ ಆರೋಗ್ಯ ಸಚಿವಾಲಯದ ಎಚ್ಚರಿಕೆ

ಮಾಸ್ಕೋ: ಕೊರೋನಾ ವೈರಸ್ ಸೋಂಕಿಗೆ ಒಳಗಾದ ರೋಗಿಗಳಿಗೆ ಕ್ಷಯರೋಗ ಬರುವ ಸಾಧ್ಯತೆ ಹೆಚ್ಚು ಎಂದು ರಷ್ಯಾದ ಆರೋಗ್ಯ ಸಚಿವಾಲಯ ಎಚ್ಚರಿಸಿದೆ.

        "ಕೋವಿಡ್ -19 ನಿಂದ ಬಳಲಿದ ನಂತರ ಅನೇಕ ರೋಗಿಗಳು ಶ್ವಾಸಕೋಶದಲ್ಲಿ ಫೈಬ್ರೋಸಿಸ್ ರೂಪದಲ್ಲಿ ಉಳಿದಿರುವ ಬದಲಾವಣೆಗಳು ಅಭಿವೃದ್ಧಿಯಾಗುತ್ತದೆ. ಈ ವರ್ಗದ ರೋಗಿಗಳಲ್ಲಿ ಮುಂದೆ ಕ್ಷಯರೋಗ ಕಾಡುವ ಅಪಾಯವಿದೆ. ಕೊರೋನಾ ಸೋಂಕಿರುವಾಗ ಹಾಗೂ ಕೊರೋನಾ ನಿವಾರಣೆಯ ನಂತರವೂ ಕ್ಷಯ ರೋಗ ಸಂಭವಿಸಬಹುದಾಗಿದೆ” ಎಂದು ಎಚ್ಚರಿಸಿದೆ.

      ಶಂಕಿತ ಕೊರೋನಾ ವೈರಸ್ ರೋಗಿಗಳು ಕ್ಷಯ ರೋಗ ತ0ಪಾಸಣೆಗೆ ಒಳಪಡುವಂತೆ ಸಚಿವಾಲಯವು ಶಿಫಾರಸು ಮಾಡಿದೆ. ಈ ರೋಗವು ಸುಪ್ತ ರೂಪದಲ್ಲಿಯೂ ಸಹ ಕೋವಿಡ್ ನ ತೀವ್ರ ಸ್ವರೂಪಗಳಿಗೆ ಕಾರಣವಾಗುತ್ತದೆ. ಅಲ್ಲದೆ ಕ್ಯಾನ್ಸರ್ ರೋಗಿಗಳು ಕೋವಿಡ್ 19 ನ ತೀವ್ರ ಸ್ವರೂಪಗಳನ್ನು ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯವನ್ನು ಹೊಂದಿದ್ದು, ಸಾಧ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಕ್ಯಾನ್ಸರ್ ರೋಗಿಗಳಿಗೆ ವಿಶೇಷ ಕೊರೋನಾ ವೈರಸ್ ಚಿಕಿತ್ಸೆ ಇಲ್ಲ ಎಂದು ಸಚಿವಾಲಯ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries