ತಿರುವನಂತಪುರ: ಕೋವಿಡ್ ನಿಯಂತ್ರಣಗಳನ್ನು ಬಲಪಡಿಸುವ ಭಾಗವಾಗಿ ಆರೋಗ್ಯ ಇಲಾಖೆ ಹೊಸ ನಿಯಮಗಳನ್ನು ಹೊರಡಿಸಿದೆ. ಹತ್ತು ವರ್ಷಕ್ಕಿಂತ ಕೆಳಗಿನ ಹರೆಯದ ಮಕ್ಕಳನ್ನು ಸಾರ್ವಜನಿಕ ಪ್ರದೇಶಗಳಿಗೆ ಕರೆತಂದರೆ ಪೋಷಕರಿಗೆ 2 ಸಾವಿರ ರೂ.ಗಳ ದಂಡ ವಿಧಿಸಲಾಗುತ್ತದೆ. 60 ವರ್ಷಕ್ಕಿಂತ ಮೇಲ್ಪಟ್ಟವರಿಗೂ ಇದನ್ನು ನಿಷೇಧಿಸಲಾಗಿದೆ.
10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೊಂದಿಗೆ ಸಾರ್ವಜನಿಕ ಸ್ಥಳಗಳಿಗೆ ಬರುವ ಪೆÇೀಷಕರಿಗೆ ಶಿಸ್ತು ಕ್ರಮ ಮತ್ತು 2 ಸಾವಿರ ರೂ.ಗಳ ದಂಡ ವಿಧಿಸಲಾಗುತ್ತದೆ ಎಂದು ಪೋಲೀಸ್ ಮೂಲಗಳು ತಿಳಿಸಿದೆ. ಸೂಚನೆಗಳನ್ನು ನಿರ್ಲಕ್ಷಿಸಿ ಮಕ್ಕಳೊಂದಿಗೆ ಆಗಮಿಸುವವರನ್ನು ಹುಡುಕಲು ಪೋಲೀಸರು ತಪಾಸಣೆ ಬಿಗುಗೊಳಿಸಿದ್ದಾರೆ.
ಇದೇ ವೇಳೆ ಪೋಷಕರು ತಮ್ಮ ಮಕ್ಕಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಚಿಕಿತ್ಸಾ ಅಗತ್ಯಗಳಿಗೆ ಮಕ್ಕಳನ್ನು ಕರೆತರಬಹುದು. ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಹೆಚ್ಚಿನ ದಟ್ಟಣೆ ಇರುವ ಪ್ರದೇಶಗಳಲ್ಲಿ ಪೋಲೀಸರು ಕಣ್ಗಾವಲು ಹೆಚ್ಚಿಸಿದ್ದಾರೆ.
ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿರುವ ಪ್ರದೇಶಗಳ ಮೇಲೆ ಪೋಲೀಸರು ನಿಗಾ ಇಡಲಿದ್ದಾರೆ. ಅಗತ್ಯವಿರುವ ಕಡೆ ದಟ್ಟಣೆ ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಶಾಪಿಂಗ್ ಮಾಲ್‍ಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ಜನರು ಸೇರುವ ಸಾಧ್ಯತೆ ಇರುವ ಆಸ್ಪತ್ರೆಗಳಲ್ಲಿ ಕಣ್ಗಾವಲು ಬಲಪಡಿಸಲಾಗುತ್ತದೆ. ಮಾಸ್ಕ್ ಮತ್ತು ಸಾಮಾಜಿಕ ದೂರವನ್ನು ಮುಖ್ಯವಾಗಿ ಗಮನಿಸಲಾಗುತ್ತದೆ.
ರಾತ್ರಿ 10 ರ ನಂತರ ಅನಗತ್ಯ ಪ್ರಯಾಣವನ್ನು ನಿಯಂತ್ರಿಸುವುದು ಮತ್ತು ಜನಸಂದಣಿಯನ್ನು ನಿಯಂತ್ರಿಸುವ ದೃಷ್ಟಿಯಿಂದ ಪೋಲೀಸರು ಗಮನ ಹರಿಸಿದ್ದಾರೆ. ಈ ಉದ್ದೇಶಕ್ಕಾಗಿ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ರಾಜ್ಯ ಪೋಲೀಸ್ ಮುಖ್ಯಸ್ಥ ಲೋಕನಾಥ ಬೆಹ್ರಾ ತಿಳಿಸಿದ್ದಾರೆ. ಎಡಿಜಿಪಿ ವಿಜಯ್ ಸಕಾರಿಯ ನಿಯಂತ್ರಣಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ.