ಮಂಜೇಶ್ವರ : 21 ವರ್ಷಕ್ಕಿಂತ ಮೇಲ್ಪಟ್ಟವರ ಸಾರ್ವಜನಿಕ ಕನ್ನಡ ವಾಚನ ಸ್ಪರ್ಧೆಯ ಜಿಲ್ಲಾ ಮಟ್ಟದ ಸ್ಪರ್ಧೆಯು ಫೆಬ್ರವರಿ 21 ಭಾನುವಾರ ಬೆಳಿಗ್ಗೆ 10 ರಿಂದ ಜಿ.ಎಚ್.ಎಸ್.ಎಸ್. ಕುಂಬಳೆ ಶಾಲೆಯಲ್ಲಿ ನಡೆಯಲಿದೆ. ಮಂಜೇಶ್ವರ, ಕಾಸರಗೋಡು , ಹೊಸದುರ್ಗ ತಾಲೂಕಿನ ಲೈಬ್ರೆರಿ ಗಳಿಂದ ಆಯ್ಕೆಯಾದ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಸ್ಪರ್ಧಾಳುಗಳು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಆಯ್ಕೆ ಮಾಡಿದ ದಲಿಯನ ಡೋಲು (ಉದಯ ಸಾರಂಗ್), ಅಂಡಮಾನ್ ಕನಸು (ರಹಮತ್ ತರೀಕೆರಿ), ಕಾಗೆ ಮುಟ್ಟಿದ ನೀರು ( ಡಾ.ಪುರುಷೋತಮ ಬಿಳಿಮಲೆ), ಬಾಲ ಮೇಧಾವಿ (ನಿರಂಜನ), ಮನದ ಕಜ್ಜಳ (ಟಿ.ಎ.ಎನ್ ಖಂಡಿಗೆ) ಎಂಬ ಐದು ಪುಸ್ತಗಳಿಂದ ಪ್ರಶ್ನೆಗಳನ್ನು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಕೇಳಲಾಗುವುದು. ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಅಹಮ್ಮದ್ ಹುಸೈನ್ ಪಿ .ಕೆ ಅವರ ಅಧ್ಯಕ್ಷತೆಯಲ್ಲಿ ಕಾಸರಗೋಡು ಜಿಲ್ಲಾ ಲೈಬ್ರೆರಿ ಕೌನ್ಸಿಲ್ ಕಾರ್ಯದರ್ಶಿ ಡಾ.ಪ್ರಭಾಕರನ್ ಕಾರ್ಯಕ್ರಮವನ್ನು ಉದ್ಘಾಟಿಸುವರು.