HEALTH TIPS

ಕೇಂದ್ರ ಬಜೆಟ್ 2021-2022: ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ?

      ನವದೆಹಲಿ: ಪ್ರಸಕ್ತ ಸಾಲಿನ ಆಯವ್ಯಯ ಮಂಡನೆ ಮಾಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಆರೋಗ್ಯ, ಕೃಷಿ ಹಾಗೂ ಮೂಲಭೂತ ಸೌಕರ್ಯ ಕ್ಷೇತ್ರಗಳಿಗೆ ಬಂಪರ್ ಅನುದಾನವನ್ನು ಘೋಷಣೆ ಮಾಡಿದ್ದಾರೆ.

      6 ಆಧಾರ ಸ್ತಂಭಗಳನ್ನು ಹೆಸರಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಇಂದು ಕೇಂದ್ರ ಬಜೆಟ್ ಮಂಡನೆ ಮಾಡಿದರು. ಇದರಂತೆ ಯಾವ ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನವನ್ನು ನೀಡಲಾಗಿದೆ ಎಂಬುದರ ಮಾಹಿತಿ ಇಲ್ಲಿದೆ...

       ಆರು ಆಧಾರ ಸ್ತಂಭಗಳಲ್ಲಿ ಮೊದಲ ಸ್ಥಾನದಲ್ಲಿರುವ ಆರೋಗ್ಯ ಕ್ಷೇತ್ರಕ್ಕೆ ವಿತ್ತ ಸಚಿವರು ರೂ.23.846 ಕೋಟಿ ಅನುದಾನವನ್ನು ಮೀಸಲಿರಿಸಿದ್ದಾರೆ.

  • ರೈಲ್ವೇ ಇಲಾಖೆಗೆ 1,10,055 ಕೋಟಿ
  • ಉತ್ಪಾದನಾ ವಲಯಕ್ಕೆ 1.94 ಕೋಟಿ ರೂಪಾಯಿ ಅನುದಾನ
  • ಮೀನುಗಾರಿಕೆ: 2 ಸಾವಿರ ಕೋಟಿ
  • ಸಂಶೋಧನಾ ವಲಯ: ರೂ.50 ಸಾವಿರ ಕೋಟಿ
  • ರಕ್ಷಣಾ ಇಲಾಖೆ: ರೂ.4.78 ಲಕ್ಷ ಕೋಟಿ
  • ಗೃಹ ಇಲಾಖೆ: ರೂ.1.66 ಕೋಟಿ
  • ಕೃಷಿ ಕ್ಷೇತ್ರ: ಕೃಷಿ ಉತ್ಪನ್ನ ಖರೀದಿಗಾಗಿಯೇ 1.72 ಲಕ್ಷ ಕೋಟಿ
  • ರೈಲ್ವೇ ವಲಯಕ್ಕೆ: 1,10,055 ಕೋಟಿ

     ಯೋಜನೆಗಳಿಗೆ ಕೇಂದ್ರ ನೀಡಿರುವ ಅನುದಾನದ ಮಾಹಿತಿ ಇಂತಿವೆ...

  • ನಗರ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಉನ್ನತೀಕರಣಕ್ಕೆ ರೂ.18 ಸಾವಿರ ಕೋಟಿ
  • ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ರೂ. 1,41,678 ಕೋಟಿ
  • ಪ್ರಧಾನ ಮಂತ್ರಿ ಆತ್ಮನಿರ್ಭರ ಸ್ವಸ್ಥ ಭಾರತ ಯೋಜನೆಗೆ ರೂ.64,180 ಕೋಟಿ
  • ವಾಯು ಮಾಲಿನ್ಯ ನಿಯಂತ್ರಣಕ್ಕೆ ರೂ.2,217 ಕೋಟಿ
  • ಕೌಶಲ್ಯಾಭಿವೃದ್ಧಿ ಯೋಜನೆಗೆ ರೂ.3 ಕೋಟಿ
  • ಜಲಜೀವನ ಮಿಷನ್​ಗೆ ರೂ.2.87 ಲಕ್ಷ ಕೋಟಿ
  • ಅರ್ಬನ್ ಕ್ಲೀನ್ ಇಂಡಿಯಾ ಮಿಷನ್​ಗೆ ರೂ.1.41 ಲಕ್ಷ ಕೋಟಿ
  • ನಿರ್ಮಾಣ ಕ್ಷೇತ್ರಕ್ಕೆ ರೂ.1.97 ಲಕ್ಷ ಕೋಟಿ
  • ಕೊವಿಡ್ ವ್ಯಾಕ್ಸಿನ್ ರೂ.35 ಸಾವಿರ ಕೋಟಿ ಅನುದಾನ ನೀಡಲಾಗಿದೆ.
  • ಕೇರಳದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ರೂ.55 ಸಾವಿರ ಕೋಟಿ
  • ರಾಷ್ಟ್ರೀಯ ಹೆದ್ದಾರಿಗಳಿಗೆ ರೂ. 1 ಲಕ್ಷ 18 ಸಾವಿರ ಕೋಟಿ
  • ವಾಹನ ಸ್ಕ್ರಾಪಿಂಗ್ ಯೋಜನೆಗೆ ರೂ.4.12 ಲಕ್ಷ ಕೋಟಿ
  • ಬೆಂಗಳೂರು ಮೆಟ್ರೋ ರೈಲ್ವೆ ಯೋಜನೆಗೆ ರೂ. 14,788 ಕೋಟಿ
  • ಪಿಎಲ್ಐ ಯೋಜನೆಗೆ ರೂ.1.97 ಲಕ್ಷ ಕೋಟಿ
  • ಪಶ್ಚಿಮ ಬಂಗಾಳದಲ್ಲಿ ರಸ್ತೆ ಯೋಜನೆಗೆ ರೂ.25 ಸಾವಿರ ಕೋಟಿ
  • ಧಾನ್ಯಗಳ ಖರೀದಿಗೆ ರೂ. 10,500 ಕೋಟಿ ರೂ ಮೀಸಲು
  • ಸಂಶೋಧನಾ ವಲಯಕ್ಕೆ ರೂ.50 ಸಾವಿರ ಕೋಟಿ ರೂ.
  • ಕೃಷಿ ಮೂಲಸೌಕರ್ಯಕ್ಕಾಗಿ ರೂ.40,000 ಕೋಟಿ
  • ಸಣ್ಣ ನೀರಾವರಿ ಬೆಳೆಗೆಳ ಸೌಕರ್ಯಕ್ಕೆ ರೂ.10,000 ಕೋಟಿ
  • ಗೋವಾ ವಿಮೋಚನಾ ವರ್ಷ ಆಚರಣೆಗೆ ರೂ. 300 ಕೋಟಿ
  • ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಯೋಜನೆಗೆ ರೂ. 1,500 ಕೋಟಿ
  • ಡಿಜಿಟಲ್ ಜನಗಣತಿಯಾಗಿದೆ ರೂ. 3,768 ಕೋಟಿ ಮೀಸಲು
  • ಭತ್ತ ಬೆಳೆಗಾರರಿಗೆ ರೂ. 1 ಲಕ್ಷದ 72 ಸಾವಿರ ಕೋಟಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries