HEALTH TIPS

'2022ಕ್ಕೆ 'ಚಂದ್ರಯಾನ-3'ಯೋಜನೆ: ಇಸ್ರೊ ಚಿಂತನೆ

           ನವದೆಹಲಿ: 'ಭಾರತದ ಬಹುನಿರೀಕ್ಷಿತ 'ಚಂದ್ರಯಾನ-3' ಯೋಜನೆಯು 2022ರಲ್ಲಿ ಕಾರ್ಯಗತಗೊಳ್ಳಲಿದೆ' ಎಂದು ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮುಖ್ಯಸ್ಥ ಕೆ.ಶಿವನ್ ತಿಳಿಸಿದ್ದಾರೆ.


       ಚಂದ್ರಯಾನ-3 ಸೇರಿದಂತೆ ಕೋವಿಡ್‌-19 ಲಾಕ್‌ಡೌನ್‌ ಅವಧಿಯು ಇಸ್ರೊದ ಹಲವು ಯೋಜನೆಗಳ ಮೇಲೂ ಪರಿಣಾಮ ಬೀರಿದೆ. ನಿಗದಿಯಂತೆ ಇದು, 2020ರ ವರ್ಷಾಂತ್ಯದಲ್ಲಿ ಕಾರ್ಯಗತಗೊಳ್ಳಬೇಕಿತ್ತು.

      ಚಂದ್ರಯಾನ-3 ನೌಕೆಯ ಸ್ವರೂಪವೂ ಬಹುತೇಕ ಚಂದ್ರಯಾನ-2ರಂತೆಯೇ ಇರುತ್ತದೆ. ಆದರೆ, ಕಕ್ಷೆಗಾಮಿ ಇರುವುದಿಲ್ಲ. ಚಂದ್ರಯಾನ-2ರಲ್ಲಿ ಉಡಾವಣೆ ಮಾಡಲಾದ ಕಕ್ಷೆಗಾಮಿಯನ್ನೇ ಬಳಕೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಸಿದ್ಧತೆ ನಡೆದಿದ್ದು, ಯೋಜನೆಯು ಬಹುತೇಕ 2022ರಲ್ಲಿ ಕಾರ್ಯಗತಗೊಳ್ಳುವ ಸಂಭವವಿದೆ ಎಂದು ಶಿವನ್‌ ತಿಳಿಸಿದರು.

       ಚಂದ್ರನ ದಕ್ಷಿಣ ಧ್ರುವದ ಭಾಗದಲ್ಲಿ ನೌಕೆಯನ್ನು ಇಳಿಸುವ ಗುರಿ ಹೊಂದಿದ್ದ ಚಂದ್ರಯಾನ-2 ಅನ್ನು ಜುಲೈ 22, 2019ರಲ್ಲಿ ಕಕ್ಷೆಗೆ ಉಡಾವಣೆ ಮಾಡಲಾಗಿತ್ತು. ಕಡೆಯ ಹಂತದಲ್ಲಿ ವಿಕ್ರಂ ಲ್ಯಾಂಡರ್ ಉರುಳಿದ ಕಾರಣ, ಭಾರತದ ಕನಸು ಈಡೇರಿರಲಿಲ್ಲ. ಚಂದ್ರಯಾನ-3 ಯೋಜನೆಯು ಇಸ್ರೊಗೆ ಸವಾಲಿನದ್ದಾಗಿದ್ದು, ಭಾರತದ ಸಾಮರ್ಥ್ಯ ಬಿಂಬಿಸುವಂತದ್ದಾಗಿದೆ.

       ಗಗನಯಾನ ಯೋಜನೆಯನ್ನು ಈ ವರ್ಷದ ಡಿಸೆಂಬರ್‌ ತಿಂಗಳಲ್ಲಿ ಕಾರ್ಯಗತಗೊಳಿಸುವ ಉದ್ದೇಶವಿದೆ. ನಿಗದಿತ ಯೋಜನೆಯಂತೆ ಇದು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕಾರ್ಯಗತಗೊಳ್ಳಬೇಕಿತ್ತು ಎಂದು ತಿಳಿಸಿದರು.

        ಮೂವರು ಭಾರತೀಯರನ್ನು ಅಂತರಿಕ್ಷಕ್ಕೆ ಕಳುಹಿಸುವ ಗುರಿಯನ್ನು 'ಗಗನಯಾನ' ಯೋಜನೆಯಡಿ ಹೊಂದಲಾಗಿದೆ. ಈ ಉದ್ದೇಶಕ್ಕಾಗಿ ಆಯ್ಕೆಯಾಗಿರುವ ನಾಲ್ವರು ಪೈಲಟ್‌ಗಳು ಸದ್ಯ ರಷ್ಯಾದಲ್ಲಿ ತರಬೇತಿಯಲ್ಲಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries