ತಿರುವನಂತಪುರ: ಲೈಫ್ ಮಿಷನ್ ಯೋಜನೆಗೆ ಇನ್ನೂ ಅರ್ಜಿ ಸಲ್ಲಿಸದವರಿಗೆ ಫೆಬ್ರವರಿ 20 ರವರೆಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ವಿಶೇಷ ಅವಕಾಶ ನೀಡಲಾಗಿದೆ. ಮುಖ್ಯಮಂತ್ರಿಯವರ ಸಾಂತ್ವನ ಸ್ಪರ್ಶಂ ಅದಾಲತ್ ನಲ್ಲಿ ಮನೆಗಾಗಿ ಅರ್ಜಿ ಸಲ್ಲಿಸಿದವರು ಕೂಡ ಈ ಅವಕಾಶವನ್ನು ಬಳಸಿಕೊಳ್ಳಬಹುದು. ಫೆಬ್ರವರಿ 15 ರಿಂದ 20 ರವರೆಗೆ ಅಕ್ಷಯ ಕೇಂದ್ರಗಳ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
ಅಗತ್ಯ ದಾಖಲೆಗಳು:
ಕೇವಲ ಮನೆ ಬಯಸುವವರಿಗೆ
1. ರೇಷನ್ ಕಾರ್ಡ್
2. ಆಧಾರ್
3. ಆದಾಯ ಪ್ರಮಾಣಪತ್ರ
4. ಜಾತಿ ಪ್ರಮಾಣಪತ್ರ (ಎಸ್‍ಸಿ / ಎಸ್‍ಟಿ ವರ್ಗದ ಸಂದರ್ಭದಲ್ಲಿ)
5. ಆಸ್ತಿಯ ತೆರಿಗೆ ರಶೀದಿ / ಗಳು
ಭೂಮಿ ಮತ್ತು ಮನೆ ಬಯಸುವವರಿಗೆ
1. ರೇಷನ್ ಕಾರ್ಡ್
2. ಆಧಾರ್
3. ಆದಾಯ ಪ್ರಮಾಣಪತ್ರ
4. ಜಾತಿ ಪ್ರಮಾಣಪತ್ರ (ಎಸ್‍ಸಿ / ಎಸ್‍ಟಿ ವರ್ಗದ ಸಂದರ್ಭದಲ್ಲಿ)
5. ಪಡಿತರ ಚೀಟಿಯಲ್ಲಿರುವವರಲಲಿ ಯಾರೂ ಆಸ್ತಿಯನ್ನು ಹೊಂದಿಲ್ಲ ಎಂದು ಗ್ರಾಮ ಅಧಿಕಾರಿಯಿಂದ ಪ್ರಮಾಣಪತ್ರ.
ಇಲ್ಲಿಯವರೆಗೆ ಪಡಿತರ ಚೀಟಿ ಪಡೆದ ಎಲ್ಲಾ ಫಲಾನುಭವಿಗಳು ಫೆಬ್ರವರಿ 20, 2021 ರವರೆಗೆ www.life2020.kerala.gov.in ಪೆÇೀರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.