ಕಾಸರಗೋಡು: ತಂಗಿರುವ ಜಾಗಕ್ಕೆ ಭೂಹಕ್ಕು ಪತ್ರ ಯೋಜನೆ ಪ್ರಕಾರ ಕಂದಾಯ ಇಲಾಖೆಯ ಮಿತ್ರಂ ಪೆÇೀರ್ಟಲ್ ಗೆ ಅರ್ಜಿ ಸಲ್ಲಿರುವವರಲ್ಲಿ ಅರ್ಹರಾದ ಮಂದಿಗೆ ಸಂಬಂಧಿಸಿ ಫೆ.20ರ ಮುಂಚಿತವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ನುಡಿದರು.
ಶನಿವಾರ ಹೊಸದುರ್ಗ ಸಿವಿಲ್ ಸ್ಟೇಷನ್ ನಲ್ಲಿ ಜರುಗಿದ ಹೊಸದುರ್ಗ, ವೆಳ್ಳರಿಕುಂಡ್ ತಾಲೂಕು ಮಟ್ಟದ ಭೂಹಕ್ಕು ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಂಗಿರುವ ಜಾಗದಲ್ಲಿ 15 ಸೆಂಟ್ಸ್ ಜಾಗಕ್ಕೆ ಮಾತ್ರ ಭೂಹಕ್ಕು ಪತ್ರ ನೀಡಲಾಗುವುದು ಎಂಬ 2011ರ ಸರಕಾರಿ ಆದೇಶದಲ್ಲಿ ಬದಲಾವಣೆ ತರಲಕಾಗಿದ್ದು, ತಂಗಿರುವ ಜಾಗ ಒಂದು ಎಕ್ರೆಗಿಂತ ಕಡಿಮೆಯಿದ್ದಲ್ಲಿ ನೀಡಿಕೆಗೆ ಆದೇಶ ಪ್ರಕಟಿಸಲಾಗಿದೆ. ಜನಸಾಮಾನ್ಯರಿಗಾಗಿ ಈ ಬದಲಾವಣೆ ನಡೆಸಲಾಗಿದೆ. ಇದು ಅನರ್ಹರು ದುರುಪಯೋಗಪಡಿಸಕೂಡದು ಎಂದು ತಿಳಿಸಿದರು.
ರಾಜ್ಯದಲ್ಲಿ 1,65,000 ಮಂದಿಗೆ ಈ ಸರಕಾರ ಭೂಹಕ್ಕು ಪತ್ರ ನೀಡಿದೆ. ಸುಮಾರು 13,200 ಮಂದಿಗೆ ಭೂಹಕ್ಕು ಪತ್ರ ನೀಡುವ ಸಮಾರಂಭವನ್ನು ಫೆ.19ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಉದ್ಘಾಟಿಸುವರು ಎಂದವರು ಹೇಳಿದರು.
ಹೊಸದುರ್ಗ ತಾಲೂಕಿನಲ್ಲಿ 41 ಮಂದಿಗೆ, ವೆಳ್ಳರಿಕುಂಡ್ ತಾಲೂಕಿನಲ್ಲಿ 17 ಮಂದಿಗೆ ಈ ಸಮಾರಂಭದಲ್ಲಿ ಭೂಹಕ್ಕು ಪತ್ರ ವಿತರಿಸಲಾಯಿತು. ಪುಲ್ಲೂರು ಗ್ರಾಮದ ಎಂಡೋಸಲ್ಫಾನ್ ಸಂತ್ರಸ್ತರು ವಾಸಿಸುತ್ತಿರುವ ಸಾಯಿಗ್ರಾಮದ 22 ಮಂದಿಗೂ ಭೂಹಕ್ಕು ಪತ್ರ ನೀಡಲಾಗಿದೆ.
ಶಾಸಕ ಕೆ.ಕುಂಞÂ ರಾಮನ್ ಅಧ್ಯಕ್ಷತೆ ವಹಿಸಿದ್ದರು. ಕಾಞಂಗಾಡ್ ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ, ನೀಲೇಶ್ವರ ನಗರಸಭೆ ಅಧ್ಯಕ್ಷೆ ಟಿ.ವಿ.ಶಾಂತಾ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸ್ವಾಗತಿಸಿದರು. ಕಾಞಂಗಾಡ್ ಉಪಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ ವಂದಿಸಿದರು.