ತಿರುವನಂತಪುರ: ರಾಜ್ಯದಲ್ಲಿ ಇಂದು 2212 ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಕೋಝಿಕೋಡ್ 374, ಆಲಪ್ಪುಳ 266, ಎರ್ನಾಕುಳಂ 246, ಮಲಪ್ಪುರಂ 229, ತಿರುವನಂತಪುರ 199, ಕೊಲ್ಲಂ 154, ಕೊಟ್ಟಾಯಂ 145, ತ್ರಿಶೂರ್ 141, ಕಣ್ಣೂರು 114, ಪತ್ತನಂತಿಟ್ಟು 97, ಕಾಸರಗೋಡು 86, ಪಾಲಕ್ಕಾಡ್ 68, ವಯನಾಡ್ 52,ಇಡುಕ್ಕಿ 42 ಎಂಬಂತೆ ಸೋಂಕು ಬಾಧಿಸಿದೆ.
ಕಳೆದ 24 ಗಂಟೆಗಳಲ್ಲಿ ಯುಕೆ ಯಿಂದ ಆಗಮಿಸಿದ 2 ಜನರಿಗೆ ಸೋಂಕು ದೃಢಪಡಿಸಲಾಗಿದೆ. ಇತ್ತೀಚೆಗೆ ಯುಕೆಯಿಂದ ಬಂದ 88 ಜನರಿಗೆ ಈಗಾಗಲೇ ಸೋಂಕು ಕಂಡುಬಂದಿದ್ದು,ಈ ಪೈಕಿ 72 ಮಂದಿಗೆ ನಕಾರಾತ್ಮಕವಾಗಿದೆ. ಒಟ್ಟು 10 ಜನರಿಗೆ ರೂಪಾಂತರಿ ವೈರಸ್ ಇರುವುದು ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 38,103 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ 5.81 ಶೇ.ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎನ್ಎಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಆಂಟಿಜೆನ್ ಪರೀಕ್ಷೆ ಸೇರಿದಂತೆ ಒಟ್ಟು 1,10,68,239 ಮಾದರಿಗಳನ್ನು ಇಲ್ಲಿಯವರೆಗೆ ಪರೀಕ್ಷೆಗೆ ಕಳುಹಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಸೋಂಕು ಬಾಧಿಸಿ 16 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ಸಾವಿನ ಸಂಖ್ಯೆ 4105 ಕ್ಕೆ ಏರಿಕೆಯಾಗಿದೆ.
ಇಂದು,ಸೋಂಕು ಪತ್ತೆಯಾದವರಲ್ಲಿ 34 ಮಂದಿ ರಾಜ್ಯದ ಹೊರಗಿಂದ ಬಂದವರು. 1987 ಮಂದಿಗೆ ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿರುವರು. ಸಂಪರ್ಕದ ಮೂಲ 169 ಮಂದಿಗಳಲ್ಲಿ ಸ್ಪಷ್ಟವಾಗಿಲ್ಲ. ಕೋಝಿಕೋಡ್ 362, ಆಲಪ್ಪು ಳ 263, ಎರ್ನಾಕುಳಂ 233, ಮಲಪ್ಪುರಂ 221, ತಿರುವನಂತಪುರ 128, ಕೊಲ್ಲಂ 153, ಕೊಟ್ಟಾಯಂ 139, ತ್ರಿಶೂರ್ 136, ಕಣ್ಣೂರು 78, ಪಥನಮತ್ತಟ್ಟ 89, ಕಾಸರಗೋಡು 78, ಪಾಲಕ್ಕಾಡ್ 26, ವಯನಾಡ್ 44, ಇಡುಕ್ಕಿ 37 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಇಪ್ಪತ್ತೆರಡು ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಕಣ್ಣೂರು 7, ಎರ್ನಾಕುಳಂ 5, ತಿರುವನಂತಪುರ, ತ್ರಿಶೂರ್, ವಯನಾಡ್, ಕಾಸರಗೋಡು ತಲಾ 2, ಮಲಪ್ಪುರಂ ಮತ್ತು ಕೋಝಿಕೋಡ್ 1 ಆರೋಗ್ಯ ಕಾರ್ಯಕರ್ತರು ಇಂದು ಸೋಂಕು ಬಾಧಿತರಾಗಿದ್ದಾರೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 5037 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 247, ಕೊಲ್ಲಂ 331, ಪತ್ತನಂತಿಟ್ಟು 488, ಆಲಪ್ಪುಳ 531, ಕೊಟ್ಟಾಯಂ 861, ಇಡಕ್ಕಿ 206, ಎರ್ನಾಕುಳಂ 389, ತ್ರಿಶೂರ್ 395, ಪಾಲಕ್ಕಾಡ್ 151, ಮಲಪ್ಪುರಂ 391, ಕೋಝಿಕೋಡ್ 617, ವಯನಾಡ್ 142, ಕಣ್ಣೂರು 207, ಕಾಸರಗೋಡು 81 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 55,468 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 9,77,012 ಜನರನ್ನು ಈವರೆಗೆ ಕೋವಿಡ್‌ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,42,070 ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 2,33,624 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 8446 ಮಂದಿ ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿದ್ದಾರೆ. ಒಟ್ಟು 825 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಹೊಸ ಹಾಟ್ ಸ್ಪಾಟ್ ಇದೆ. ಒಂದು ಪ್ರದೇಶವನ್ನು ಹಾಟ್‌ಸ್ಪಾಟ್‌ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 372 ಹಾಟ್‌ಸ್ಪಾಟ್‌ಗಳಿವೆ.