ನವದೆಹಲಿ: ವಿದೇಶಗಳಿಗೆ ಈವರೆಗೂ 229.7 ಲಕ್ಷ ಡೋಸ್ ಕೋವಿಡ್ ಲಸಿಕೆಯನ್ನು ಭಾರತ ಪೂರೈಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ತಿಳಿಸಿದೆ.
ಈವರೆಗೂ 229.7 ಲಕ್ಷ ಡೋಸ್ ಕೊರೋನಾ ಲಸಿಕೆಯನ್ನು ಜಾಗತಿಕ ಸಮುದಾಯಕ್ಕೆ ಪೂರೈಸಲಾಗಿದೆ. ಇದರಲ್ಲಿ 64.7 ಲಕ್ಷ ಡೋಸ್ ಗಳನ್ನು ಸಮ್ಮತಿಯಿಂದ ಪೂರೈಸಿದ್ದರೆ 165 ಲಕ್ಷ ಡೋಸ್ ಗಳನ್ನು ವಾಣಿಜ್ಯಾತ್ಮಕ ಆಧಾರದ ಮೇಲೆ ಪೂರೈಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ತಿಳಿಸಿದ್ದಾರೆ.