HEALTH TIPS

ಫೆ.23 ರಂದು ಕೆ.ಎಸ್.ಆರ್.ಟಿ.ಸಿ. ಬಸ್ ಮುಷ್ಕರ

             ತಿರುವನಂತಪುರ:ರಾಜ್ಯ ರಸ್ತೆಸಾರಿಗೆ ಸಂಸ್ಥೆ(ಕೆ.ಎಸ್.ಆರ್.ಟಿ.ಸಿ)ಯ ಯುಡಿಎಫ್ ಪರ ಸಂಘಟನೆ ಫೆ. 23 ರಂದು ರಾಜ್ಯವ್ಯಾಪಿಯಾಗಿ ಮುಷ್ಕರ ನಡೆಸುವುದುದಾಗಿ ಕರೆನೀಡಿದೆ. ಸ್ವಿಪ್ಟ್ ಕಂಪೆನಿ ರೂಪೀಕರಿಸುವುದರಿಂದ ಹಿಂದೆ ಸರಿಯಬೇಕು, ವೇತನ ಪರಿಷ್ಕರಣೆಯನ್ನು ಜಾರಿಗೊಳಿಸಬೇಕು ಸಹಿತ ವಿವಿಧ ಬೇಡಿಕೆ ಮುಂದಿರಿಸಿ ಈ ಮುಷ್ಕರಕ್ಕೆ ಕರೆನೀಡಲಾಗಿದೆ. 


 

          ಸ್ವಿಫ್ಟ್ ಕಂಪನಿಯ ರಚನೆಗೆ ಟ್ರೇಡ್ ಯೂನಿಯನ್ ಗಳು ತೋರಿಸುತ್ತಿರುವ ವಿರೋಧವನ್ನು ನಿವಾರಿಸಲು ಹಣಕಾಸು ಸಚಿವ ಥಾಮಸ್ ಐಸಾಕ್ ಶುಕ್ರವಾರ ರಾಜಿ ಸೂತ್ರಗಳನ್ನು ತಿಳಿಸಿರುವ ಬೆನ್ನಿಗೇ ಈ ಮುಷ್ಕರಕ್ಕೆ ಕರೆನೀಡಲಾಗಿದೆ. 

         ಸ್ವಿಫ್ಟ್ ಕಂಪನಿಯ ರಚನೆಯನ್ನು ಒಕ್ಕೂಟಗಳು ವಿರೋಧಿಸಿದರೆ, ಅದು ಸಂಪೂರ್ಣ ಸರ್ಕಾರಿ ಸ್ವಾಮ್ಯದ ಸೊಸೈಟಿಯಾಗುವುದೆಂದು ಸಚಿವರು ತಿಳಿಸಿದ್ದರು. 

         ಸಾರಿಗೆ ಸಚಿವ ಎ.ಕೆ.ಶಶೀಂದ್ರನ್ ಮತ್ತು ಕೆ.ಎಸ್.ಆರ್.ಟಿ.ಸಿ. ಸಿಎಂಡಿ ಬಿಜು ಪ್ರಭಾಕರ್ ಅವರೊಂದಿಗಿನ ಸಭೆಯಲ್ಲಿ ವಿತ್ತ ಸಚಿವರು ಈ ಪ್ರಸ್ತಾಪವನ್ನು ಮಾಡಿದ್ದಾರೆ. ಸುಧಾರಣೆಗಳಿಲ್ಲದೆ ಕೆ.ಎಸ್.ಆರ್.ಟಿ.ಸಿ.ಯು ಕೇವಲ ಸರ್ಕಾರದ ನೆರವಿನೊಂದಿಗೆ ಮುಂದುವರಿಯಲು ಸಾಧ್ಯವಿಲ್ಲ ಎಂದು ಹಣಕಾಸು ಸಚಿವರು ಹೇಳಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries