HEALTH TIPS

ಯಾರೂ ನಿರಂತರವಾಗಿ ಗೆಲ್ಲಲು ಸಾಧ್ಯವಾಗದ 24 ಕ್ಷೇತ್ರಗಳು! ಕಳೆದ ಬಾರಿ ಎಡಪಕ್ಷ ಗೆದ್ದಿರುವುದು 14

       

             ಕೊಚ್ಚಿ: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ 24 ಕ್ಷೇತ್ರಗಳು ನಿರ್ಣಾಯಕವಾಗಲಿವೆ. ಯುಡಿಎಫ್ ಮತ್ತು ಎಲ್‍ಡಿಎಫ್ ಸಮಾನ ಅವಕಾಶಗಳನ್ನು ಹೊಂದಿರುವ ಈ ಕ್ಷೇತ್ರಗಳಲ್ಲಿ ಯಾರು ಗೆದ್ದರೂ ಮುಂದಿನ ಸರ್ಕಾರವನ್ನು ಯಾರು ಮುನ್ನಡೆಸುತ್ತಾರೆ ಎಂಬುದನ್ನು ನಿರ್ಧರಿಸುತ್ತದೆ. ಕಳೆದ ಚುನಾವಣೆಯಲ್ಲಿ ಇಲ್ಲಿ ಗೆದ್ದವರಲ್ಲಿ ಹೆಚ್ಚಿನವರು 4,000 ಮತಗಳಿಗಿಂತ ಕಡಿಮೆ ಮತದಿಂದ ಗೆದ್ದವರು. 

       ಈ 24 ಕ್ಷೇತ್ರಗಳಲ್ಲಿ ಎಲ್‍ಡಿಎಫ್ 14 ಮತ್ತು ಯುಡಿಎಫ್ 10 ಸ್ಥಾನಗಳನ್ನು ಗೆದ್ದಿತ್ತು. ಇವುಗಳಲ್ಲಿ ಈ ಬಾರಿ ಯಾವ ಕ್ಷೇತ್ರದಲ್ಲಿ ಮತ್ತೆ ಯಾರೆಲ್ಲ ಬಹುಮತದಿಂದ ಗೆಲುವು ಸಾಧಿಸುವರೆಂಬುದು ಕುತೂಹಲಕಾರಿ.

               ಎಡಪಂಥೀಯರು ಗೆದ್ದ ಕ್ಷೇತ್ರಗಳು:

     ಉದುಮದಲ್ಲಿ ಸಿಪಿಎಂನ ಕೆ ಕುಂಞÂ ರಾಮನ್ 3842 ಮತಗಳಿಂದ ಜಯಗಳಿಸಿದ್ದರು. ಕೆ ಸುಧಾಕರನ್ ಎದುರಾಳಿ. ಈ ಬಾರಿ ಕೃಪೇಶ್-ಶರತ್‍ಲಾಲ್ ಅವರ ಕೊಲೆ ಮತ್ತು ತನಿಖೆ ಕುಂಞÂ ರಾಮನ್ ಅವರ ಮತಗಳಿಕೆಯ ಮೇಲೆ ಪರಿಣಾಮ ಬೀರಲಿದೆ ಎನ್ನಬಲಾಗುತ್ತದೆ. ಬಾಲಕೃಷ್ಣನ್ ಪೆರಿಯ ಇಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂಬ ಸೂಚನೆಗಳಿವೆ.

        ಕಣ್ಣೂರಿನಲ್ಲಿ ಕಡನ್ನಪಳ್ಳಿ ರಾಮಚಂದ್ರನ್ ಕೇವಲ 1196 ಮತಗಳಿಂದ ಜಯಗಳಿಸಿದ್ದರು. ಈ ಬಾರಿ ಕಡನ್ನಪಳ್ಳಿ ಸ್ಪರ್ಧಾ ಕಣಕ್ಕಿಳಿಯುವುದಿಲ್ಲ. ಮಾನಂದವಾಡಿಯಲ್ಲಿ,   ಪಡೆದಿರುವ ಮತ ಕೇವಲ 1307 ಮತಗಳು. ಮಲಪ್ಪುರಂ ಕೊಡುವಳ್ಳಿಯಲ್ಲಿ, ಕಾರಾಟ್ ರಜಾಕ್ 573 ಮತಗಳಿಂದ ಜಯಗಳಿಸಿದ್ದರು.

         ತಿರುವಂಬಾಡಿ ಜಾರ್ಜ್ ಎಂ ಥಾಮಸ್ (3008), ಇರಿಂಞÁಲಕುಡ - ಕೆ.ಯು.ಅರುಣನ್ (2711), ಕೊಚ್ಚಿ - ಕೆ.ಜೆ. ಮ್ಯಾಕ್ಸಿ (1086), ಉಡುಂಬಂಚೋಳ - ಎಂ.ಎಂ.ಮಣಿ (1109), ಪೀರ್ಮೆಡ್ - ಇ.ಎಸ್. ಬಿಜಿಮೋಲ್ (314), ಕಾಂಜಿರಪಳ್ಳಿ - ಎನ್ ಜಯರಾಜ್ (3890) ಆರ್ ರಾಮಚಂದ್ರನ್ (1759), ವರ್ಕಲಾ - ವಿ ಜಾಯ್ (2389), ನೆಡುಮಾಂಗಾಡ್ - ಸಿ ದಿವಾಕರನ್ (3621) ಮತ್ತು ಕಾಟ್ಟಾಕಡ - ಐಬಿ ಸತೀಶ್ (849).

                     ಯುಡಿಎಫ್ ಗೆದ್ದ ಕ್ಷೇತ್ರಗಳು:

     ಅಜಿಕೋಡ್ - ಕೆ.ಎಂ.ಶಾಜಿ (2287), ಕುಟ್ಟಿಯಾಡಿ - ಪರಕ್ಕಲ್ ಅಬ್ದುಲ್ಲಾ (1157), ಪೆರಿಂದಲ್ ಮಣ್ಣ - ಮಂಜಲಂ ಕುಂಞ  ಅಲಿ (579), ಮಂಕಡ - ಅಹ್ಮದ್ ಕಬೀರ್ (1508), ವಡಕಾಂಚೇರಿ - ಅನಿಲ್ ಅಕ್ಕರ (43), ಕುನ್ನತ್ತುನಾಡು - ವಿ.ಪಿ. ಸಿ.ಎಫ್ ಥಾಮಸ್ (1849)

 ಕೋವಲಂ-ಎಂ ವಿನ್ಸೆಂಟ್ (2615), ಅರೂರ್-ಶಾನಿಮೋಲ್ (2079) ಮತ್ತು ಎರ್ನಾಕುಳಂ-ಟಿಜೆ ವಿನೋದ್ (3750) ಕ್ಷೇತ್ರಗಳನ್ನು ಗೆದ್ದುಕೊಂಡಿದ್ದರು. 

         ಈ ಕ್ಷೇತ್ರಗಳು ಈ ಬಾರಿ ಹೇಗಾಗಲಿದೆ ಎಂಬುದು ಅನಿರೀಕ್ಷಿತ. ಈ ಕೆಲವು ಕ್ಷೇತ್ರಗಳು ಯುಡಿಎಫ್ ಭದ್ರಕೋಟೆಗಳು ಮತ್ತು ಎಲ್ಡಿಎಫ್ ಭದ್ರಕೋಟೆಗಳು. ಉತ್ತಮ ಅಭ್ಯರ್ಥಿಗಳು ಇಲ್ಲಿ ಸ್ಪರ್ಧಿಸಿದರೆ ಗೆಲುವು ಸುಲಲಿತ. ಅದಕ್ಕಾಗಿಯೇ ಇಲ್ಲಿಯ ಗೆಲುವು ಎರಡೂ ರಂಗಗಳಿಗೆ ತುಂಬಾ ನಿರ್ಣಾಯಕವಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries