ನವದೆಹಲಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ ನಾಲ್ಕನೇ ದಿನಕ್ಕೆ ಎಲ್ ಪಿಸಿ ಸಿಲಿಂಡರ್ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಭಾರತದಾದ್ಯಂತ ಫೆಬ್ರವರಿ.04ರ ಗುರುವಾರದಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಏರಿಕೆ ಆಗಿರುವ ಹಿನ್ನೆಲೆ ದೇಶದ ಮಹಾನಗರಗಳಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯನ್ನು 25 ರೂಪಾಯಿ ಹೆಚ್ಚಿಸಲಾಗಿದೆ. ದೆಹಲಿಯಲ್ಲಿ 14.2 ಕೆಜಿ ತೂಕದ ಸಬ್ಸಿಡಿ ರಹಿತ ಅಡುಗೆ ಅನಿಲದ ಬೆಲೆ 719 ರೂಪಾಯಿ ಆಗಿದೆ.
ವಾಣಿಜ್ಯ ಉಪಯೋಗಕ್ಕಾಗಿ ಬಳಸುವ 19 ಕೆಜಿ ತೂಕದ ಸಿಲಿಂಡರ್ ಬೆಲೆಯನ್ನೂ ಸಹ ಏರಿಕೆ ಮಾಡಲಾಗಿದೆ. ಒಂದು ವಾಣಿಜ್ಯ ಉಪಯೋಗಿ ಸಿಲಿಂಡರ್ ಬೆಲೆಗೆ 184 ರೂ. ಹೆಚ್ಚಿಸಲಾಗಿದ್ದು, 1349 ರೂಪಾಯಿಯಿಂದ 1533 ರೂಪಾಯಿಗೆ ಏರಿಕೆಯಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಸಿಲಿಂಡರ್ ಪರಿಷ್ಕೃತ ದರ:
ಭಾರತದಾದ್ಯಂತ ಸಿಲಿಂಡರ್ ಬೆಲೆ ಏರಿಕೆಯ ನಂತರದಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಅಡುಗೆ ಅನಿಲದ ಪರಿಷ್ಕೃತ ದರ ಎಷ್ಟಿದೆ ಎನ್ನುವುದರ ಪಟ್ಟಿ ಇಲ್ಲಿದೆ.
- ನವದೆಹಲಿ: 719 ರೂ
- ಮುಂಬೈ: 719 ರೂ
- ಲಕ್ನೋ: 757 ರೂ
- ನೋಯ್ಡಾ: 717 ರೂ
- ಚೆನ್ನೈ: 735 ರೂ
- ಕೋಲ್ಕತಾ: 745.50
- ಬೆಂಗಳೂರು: 722 ರೂ
- ಚಂಡೀಗಢ್ : 728.50 ರೂ
- ಹೈದರಾಬಾದ್: 771.50
- ಗುರ್ಗಾಂವ್: 728 ರೂ
- ಜೈಪುರ್: 723 ರೂ
ಪಾಟ್ನಾ: 792.50 ರೂ.