ಕೊಚ್ಚಿ: ಐತಿಹಾಸಿಕ ಚೊಟ್ಟಾನಿಕ್ಕರ ಶ್ರೀಭಗವತಿ ದೇವಾಲಯದ ಮಕಂ ತೋದಲ್ ಹಬ್ಬ ಫೆ. 26 ರಂದು ನಡೆಯಲಿದೆ. ಕೋವಿಡ್ ಮಾನದಂಡಗಳ ಅನುಸಾರ ಭಕ್ತರಿಗೆ ಮಕಂ ಪ್ರಾರ್ಥನೆ(ಪವಿತ್ರ ದೇವರನ್ನು ಸ್ಪರ್ಶಿಸಿ ಅರ್ಚಿಸುವ) ಹಬ್ಬಾಚರಣೆಗೆ ಪ್ರವೇಶವನ್ನು ನೀಡಲು ನಿರ್ಧರಿಸಲಾಗಿದೆ. ಚೊಟ್ಟಾನಿಕ್ಕರ ದೇವಸ್ಥಾನದಲ್ಲಿ ನಡೆದ ಕೊಚ್ಚಿನ್ ದೇವಸ್ವಂ ಮಂಡಳಿ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಉತ್ಸವಕ್ಕೆ ಫೆ. 20 ರಂದು ಧ್ವಜಾರೋಹಣ ನಡೆಯಲಿದೆ. ಮತ್ತು ಮಾರ್ಚ್ 1 ರಂದು ಮುಕ್ತಾಯಗೊಳ್ಳಲಿದೆ. 26 ರಂದು ಮಧ್ಯಾಹ್ನ 2 ರಿಂದ ರಾತ್ರಿ 10 ರವರೆಗೆ ಭಕ್ತರಿಗೆ ಮಕಂ ದರ್ಶನ ನೋಡಲು ಅವಕಾಶವಿದೆ. ಇತರ ರಾಜ್ಯಗಳ ಭಕ್ತರು ದರ್ಶನ ಪರವಾನಗಿಗಾಗಿ 24 ಗಂಟೆಗಳ ಒಳಗೆ ಕೋವಿಡ್ ನೆಗೆಟಿವ್ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ.
ಹತ್ತು ವರ್ಷದೊಳಗಿನ ಬಾಲಕರು, ಗರ್ಭಿಣಿಯರು, ಇತ್ತೀಚೆಗೆ ಕೋವಿಡ್ ಡಿಸ್ಚಾರ್ಜ್ ಹೊಂದಿದವರು, ರೋಗಲಕ್ಷಣಗಳು ಇರುವವರು, ಕಂಟೈನ್‍ಮೆಂಟ್ ವಲಯದಲ್ಲಿರುವವರು ಮತ್ತು ಸಂಪರ್ಕತಡೆಯಲ್ಲಿ ವಾಸಿಸುವವರಿಗೆ ಉತ್ಸವದಲ್ಲಿ ಪಾಲ್ಗೊಳ್ಳಲು ಅನುಮತಿಸಿಲ್ಲ.