ತಿರುವನಂತಪುರ: ವಿಶ್ವ ಪ್ರಸಿದ್ದ ಅಟ್ಟುಕ್ಕಾಲ್ ಪೊಂಗಾಲ ಹಬ್ಬ ಫೆಬ್ರವರಿ 27 ರಂದು ನಡೆಯಲಿದೆ. ಕೊರೋನಾ ಪರಿಸ್ಥಿತಿಯಿಂದಾಗಿ, ದೇವಾಲಯದ ಆವರಣದಲ್ಲಿ, ಹತ್ತಿರದ ಬೀದಿಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಪೊಂಗಾಲ ಇರಿಸಲು ಅನುಮತಿನೀಡಲಾಗಿಲ್ಲ. ಭಕ್ತರು ಮನೆಯಲ್ಲಿ ಪೊಂಗಾಲವನ್ನು ಅರ್ಪಿಸಬಹುದು ಮತ್ತು ಕುತಿಯೊಟ್ಟ ಶಪತಗಳನ್ನು ದೇವಾಲಯಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಕೊರೋನಾ ಮಾನದಂಡಗಳನ್ನು ಅನುಸರಿಸಿ ಈ ವರ್ಷದ ಅಟ್ಟುಕಲ್ ಪೆÇಂಗಾಲವನ್ನು ನಡೆಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಪ್ಪುಕೆಟ್ಟಿಯ ವಿಧಾನಗಳೊಂದಿಗೆ ಫೆಬ್ರವರಿ 19 ರಂದು ಅಟ್ಟುಕ್ಕಾಲ್ ನಲ್ಲಿ ಉತ್ಸವ ಪ್ರಾರಂಭವಾಗಲಿದೆ. ಫೆಬ್ರವರಿ 27 ರ ಶನಿವಾರ ಬೆಳಿಗ್ಗೆ 10.50 ಕ್ಕೆ ದೇವಾಲಯದಲ್ಲಿ ಸ್ಥಾಪಿಸಲಾಗಿರುವ ಪಂಡಾರ ಒಲೆಗೆ ಅಗ್ನಿ ಸ್ಪರ್ಶ ನಡೆಸಲಾಗುವುದು. ಮಧ್ಯಾಹ್ನ 3.40 ಕ್ಕೆ ಪೊಂಗಾಲ ಅರ್ಪಣೆ ನಡೆಯಲಿದೆ. ಅಂದು ರಾತ್ರಿ ತೆರಳುವ ಸಮಾರಂಭದ ಬಳಿಕ ಫೆಬ್ರವರಿ 28 ರಂದು ಕುರುತಿ ತರ್ಪಣದೊಂದಿಗೆ ಉತ್ಸವವು ಮುಕ್ತಾಯಗೊಳ್ಳಲಿದೆ.
ದೇವಾಲಯದಲ್ಲಿನ ಹರಿಕೆ ದೀಪವನ್ನೂ ನಿಯಂತ್ರಿಸಲಾಗುತ್ತದೆ. ಕೊರೋನಾ ನಿಬಂಧನೆಗಳನ್ನು ಪಾಲಿಸುವ ಕ್ರಮ ಭಾಗವಾಗಿ ತಾಲಪ್ಪೊಲಿಯನ್ನು ಹತ್ತು ಮತ್ತು ಹನ್ನೆರಡು ವರ್ಷದೊಳಗಿನವರಿಗೆ ಕಡಿತಗೊಳಿಸಲಾಗುವುದು. ನೆಡುಮುಡಿ ವೇಣು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.