HEALTH TIPS

2ನೇ ಹಂತದ ಕರೊನಾ ಲಸಿಕೆ ಅಭಿಯಾನ : ಇಲ್ಲಿದೆ, ನಿಮ್ಮ ಪ್ರಶ್ನೆಗಳಿಗೆ ಉತ್ತರ

       ನವದೆಹಲಿ: ಮಾರ್ಚ್​ 1 ರಿಂದ 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಮತ್ತು ಕೋಮಾರ್ಬಿಡಿಟೀಸ್ ಇರುವ 45 ವರ್ಷ ಮೇಲ್ಪಟ್ಟ ನಾಗರೀಕರಿಗೆ ಕರೊನಾ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದ್ದಾಯಿತು. ಆದರೆ ಲಸಿಕೆ ಪಡೆಯಲು ಅನುಸರಿಸಬೇಕಾದ ಕ್ರಮಗಳೇನು? ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕೇ? ಅಥವಾ ಲಸಿಕಾ ಕೇಂದ್ರಕ್ಕೆ ನೇರವಾಗಿ ಹೋಗಿ ಲಸಿಕೆ ಪಡೆಯಬಹುದೇ? ದುಡ್ಡು ಕಟ್ಟಬೇಕೇ ? …ಹೀಗೆ ಹಲವು ಪ್ರಶ್ನೆಗಳು ಈಗ ನಾಗರೀಕರನ್ನು ಕಾಡುತ್ತಿವೆ. ಉತ್ತರ ನೀಡುವ ಪ್ರಯತ್ನ ಇಲ್ಲಿದೆ -


         ಈ ಎಲ್ಲಾ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರವು ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಕಾರ್ಯದರ್ಶಿಗಳಿಗೆ ವೀಡಿಯೊ ಕಾನ್ಫರೆನ್ಸ್​ ಮೂಲಕ ನಿನ್ನೆ ಮಾಹಿತಿ ನೀಡಿದೆ. ಕರೊನಾ ಲಸಿಕೆ ಪಡೆಯಲು ನೋಂದಾಯಿಸಿಕೊಳ್ಳಲು ಮೂರು ಮಾರ್ಗಗಳಿವೆ. 1) ಅಡ್ವಾನ್ಸ್ ಸೆಲ್ಫ್ ರಿಜಿಸ್ಟ್ರೇಷನ್ - ಅಂದರೆ ಮುಂಚಿತವಾಗಿ ಕೋವಿನ್ ಅಥವಾ ಇತರ ಆಯಪ್ ಮೂಲಕ ನಾಗರೀಕರು ಸ್ವಯಂನೋಂದಣಿ ಮಾಡಿಕೊಳ್ಳಬಹುದು; 2) ಆನ್​ಸೈಟ್ ರಿಜಿಸ್ಟ್ರೇಷನ್ - ಅಂದರೆ ನಾಗರೀಕರು ನಿಗದಿತ ಕರೊನಾ ಲಸಿಕಾ ಕೇಂದ್ರಕ್ಕೆ ಹೋಗಿ ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳಬಹುದು; ಮತ್ತು 3) ಫೆಸಿಲಿಟೇಟೆಡ್ ಕೊಹೊರ್ಟ್ ರಿಜಿಸ್ಟ್ರೇಷನ್ ಅಂದರೆ ಸ್ಥಳೀಯ ಸರ್ಕಾರಗಳು ನಡೆಸುವ ವಿಶೇಷ ಲಸಿಕಾ ಕಾರ್ಯಕ್ರಮಗಳಿಗೆ ನೋಂದಣಿಯ ಅವಕಾಶ.

         ಮೊದಲ ಎರಡು ಮಾರ್ಗಗಳಲ್ಲಿ ಫಲಾನುಭವಿಗಳ ಗುಂಪಿಗೆ ಸೇರುವ ನಾಗರೀಕರು ತಾವಾಗಿಯೇ ಲಸಿಕಾ ಕೇಂದ್ರಗಳಿಗೆ ಹೋಗಿ ಲಸಿಕೆ ಪಡೆಯಲು ಅವಕಾಶವಿರುತ್ತದೆ. ಈ ಮುನ್ನ ವೈದ್ಯರು, ಲಸಿಕೆ ನೀಡುವಾಗ ನಿರ್ದಿಷ್ಟ ಲಸಿಕಾ ಕೇಂದ್ರವನ್ನು ಸರ್ಕಾರವೇ ನಿಯೋಜಿಸುತ್ತಿತ್ತು. ಆದರೆ ಈಗ ನಾಗರೀಕರು ಪಟ್ಟಿ ಮಾಡಲಾದ ಲಸಿಕಾ ಕೇಂದ್ರಗಳಲ್ಲಿ ತಮಗೆ ಬೇಕಾದ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎನ್ನಲಾಗಿದೆ. ಮೂರನೆಯ ಮಾರ್ಗದಲ್ಲಿ, ಆಯಾ ರಾಜ್ಯ ಸರ್ಕಾರಗಳು ಒಟ್ಟಾಗಿ ಫಲಾನುಭವಿಗಳು ಇರುವ ಸ್ಥಳಕ್ಕೆ ಹೋಗಿ ಲಸಿಕೆ ನೀಡಲು ವಿಶೇಷ ಕಾರ್ಯಕ್ರಮಗಳನ್ನು ಯೋಜಿಸಬಹುದಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

        ಮುಂಚಿತ ನೋಂದಣಿ: ಮೊದಲನೇ ಮಾರ್ಗದಲ್ಲಿ, ಮುಂಚಿತವಾಗಿ ಕೋ-ವಿನ್ 2.0 ಪೋರ್ಟಲ್​ಅನ್ನು ಡೌನ್ಲೋಡ್ ಮಾಡಿಕೊಂಡು ಅಥವಾ ಆರೋಗ್ಯ ಸೇತುವಿನಂಥ ಇತರ ಆಯಪ್​ಗಳ ಮೂಲಕ ಲಸಿಕೆಗಾಗಿ ನೋಂದಾಯಿಸಿಕೊಳ್ಳಬೇಕು. ಈ ಆಯಪ್​ಗಳಲ್ಲಿ ಕರೊನಾ ಲಸಿಕಾ ಕೇಂದ್ರಗಳಾಗಿ ಸೇವೆ ಒದಗಿಸಲಿರುವ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಪಟ್ಟಿ ಮಾಡಲಾಗುವುದು. ಹಾಗೇ, ಲಸಿಕೆ ನೀಡಲಾಗುವ ದಿನಾಂಕ ಮತ್ತು ಸಮಯದ ವಿವರಗಳನ್ನು ಒದಗಿಸಲಾಗುವುದು. ಫಲಾನುಭವಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಲಸಿಕಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡು ಅಪಾಯಿಂಟ್​ಮೆಂಟ್​ ಬುಕ್ ಮಾಡಿಕೊಳ್ಳಬೇಕು.

       ಸ್ಥಳದಲ್ಲೇ ನೋಂದಣಿ: ಎರಡನೇ ಮಾರ್ಗದಲ್ಲಿ, ಫಲಾನುಭವಿಗಳ ಗುಂಪಿಗೆ ಸೇರುವ ನಾಗರೀಕರು, ಗುರುತಿಸಲ್ಪಟ್ಟ ಲಸಿಕಾ ಕೇಂದ್ರಗಳಿಗೆ ನೇರವಾಗಿ ಹೋಗಿ ಅಲ್ಲೇ ನೋಂದಾಯಿಸಿಕೊಂಡು, ಲಸಿಕೆ ಪಡೆಯುವ ಅವಕಾಶವಿದೆ ಎಂದು ಆರೋಗ್ಯ ಸಚಿವಾಲಯ ಘೋಷಿಸಿದೆ.

       ಲಸಿಕಾ ಕೇಂದ್ರಗಳು: ಸರ್ಕಾರ ನಡೆಸುವ ಎಸ್‌ಎಚ್‌ಸಿ, ಪಿಎಚ್‌ಸಿ, ಸಿಎಚ್‌ಸಿ, ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು, ಉಪವಿಭಾಗ ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಸರ್ಕಾರಿ ಕೇಂದ್ರಗಳಾಗಿರಲಿವೆ. ಖಾಸಗಿ ಕೇಂದ್ರಗಳಾಗಿ, ಸರ್ಕಾರಿ ಆರೋಗ್ಯ ಯೋಜನೆಗಳು ಮತ್ತು ವಿಮಾ ಯೋಜನೆಗಳೊಂದಿಗೆ ಸಹಕಾರ ಹೊಂದಿರುವ ಎಂಪನೇಲ್ ಆದ ಖಾಸಗಿ ಆಸ್ಪತ್ರೆಗಳು ಲಸಿಕಾ ಕೇಂದ್ರಗಳಾಗಲಿವೆ. ಸೂಕ್ತ ಸೌಲಭ್ಯ, ಸ್ಥಳಾವಕಾಶ ಮತ್ತು ಸಿಬ್ಬಂದಿ ಹೊಂದಿರುವ ಕೇಂದ್ರಗಳನ್ನು ನಿಗದಿಪಡಿಸಲು ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ.

       ಐಡಿ ಅಗತ್ಯ : ಲಸಿಕೆ ಪಡೆಯಲು ಹೋಗುವ ಎಲ್ಲಾ ಫಲಾನುಭವಿಗಳು ಆಧಾರ್ ಕಾರ್ಡ್, ಎಲೆಕ್ಟೊರಲ್ ಫೋಟೋ ಐಡಿ ಕಾರ್ಡ್(ಎಪಿಕ್) ಅಥವಾ ಆನ್​ಲೈನ್ ನೋಂದಣಿಯ ಸಮಯದಲ್ಲಿ ಬಳಸಲಾದ ಫೋಟೋ ಐಡಿ ದಾಖಲಾತಿಯನ್ನು ತೆಗೆದುಕೊಂಡು ಹೋಗಬೇಕು. ಕೋಮಾರ್ಬಿಡಿಟೀಸ್ ಹೊಂದಿರುವ 45 ವರ್ಷ ಮೇಲ್ಪಟ್ಟ ನಾಗರೀಕರು ನೋಂದಾಯಿತ ವೈದ್ಯರಿಂದ ನೀಡಲಾಗಿರುವ ಸರ್ಟಿಫಿಕೇಟ್ ಆಫ್ ಕೋಮಾರ್ಬಿಡಿಟಿಯನ್ನು ತೆಗೆದುಕೊಂಡು ಹೋಗಬೇಕು.

      ಲಸಿಕಾ ಅಭಿಯಾನದ ಮೊದಲ ಹಂತದಲ್ಲಿ ಲಸಿಕೆ ಪಡೆಯದಿರುವ ಆರೋಗ್ಯ ಸೇವಾ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ಈಗಲೂ ಸಹ ಲಸಿಕೆ ಪಡೆಯಬಹುದಾಗಿದೆ. ಅಂಥವರು ಐಡಿ ದಾಖಲಾತಿಯೊಂದಿಗೆ ಫೋಟೋ ಮತ್ತು ಜನ್ಮದಿನಾಂಕವಿರುವ ಎಂಪ್ಲಾಯ್​ಮೆಂಟ್ ಸರ್ಟಿಫಿಕೇಟ್ ಅಥವಾ ಅಫಿಷಿಯಲ್ ಐಡಿಯನ್ನು ಸಹ ಒಯ್ಯಬೇಕಾಗುತ್ತದೆ.

        ಲಸಿಕೆ ನೀಡಲಾಗುವ ದಿನಾಂಕ ಮತ್ತು ವೇಳಾಪಟ್ಟಿಯನ್ನು ಸ್ಥಳೀಯ ಸರ್ಕಾರಗಳು ಇನ್ನೂ ನಿರ್ಧರಿಸಬೇಕಾಗಿದೆ. ಇನ್ನು, ಎಲ್ಲಾ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಕರೊನಾ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು. ಆದರೆ ಖಾಸಗಿ ಕೇಂದ್ರಗಳಲ್ಲಿ ಲಸಿಕೆ ಪಡೆಯಲು ಮುಂಚೆಯೇ ನಿರ್ಧರಿಸಲಾಗುವ ಚಾರ್ಜ್‌ಅನ್ನು ಕಟ್ಟಬೇಕು. ಎಲ್ಲಾ ಫಲಾನುಭವಿಗಳ ಮಾಹಿತಿಯನ್ನು ಕೋ-ವಿನ್ ಪ್ಲಾಟ್​ಫಾರಂನಲ್ಲಿ ಶೇಖರಿಸಿಡಲಾಗುವುದು. ಲಸಿಕೆ ಪಡೆದ ನಂತರ ಇವರಿಗೆ ಡಿಜಿಟಲ್ ಕ್ಯೂಆರ್​ ಕೋಡ್ ಆಧರಿತವಾದ ಪ್ರಾವಿಷನಲ್(ಮೊದಲನೇ ಡೋಸ್ ನಂತರ) ಮತ್ತು ಫೈನಲ್(ಎರಡನೇ ಡೋಸ್ ನಂತರ) ಸರ್ಟಿಫಿಕೇಟ್​ಗಳನ್ನು ನೀಡಲಾಗುವುದು


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries