ರಿಯಾದ್ : ಎಕ್ಸಿಟ್ ಹಾಗೂ ರೀ ಎಂಟ್ರಿ ವೀಸಾ ಮೂಲಕ ದೇಶದಿಂದ ನಿರ್ಗಮಿಸಿದವರು ಮತ್ತು ವೀಸಾ ಅವಧಿ ಕೊನೆಗೊಳ್ಳುವ ಮೊದಲು ವಾಪಸ್ ಬಾರದೆ ಇದ್ದವರು, ಮೂರು ವರ್ಷಗಳ ಅವಧಿಗೆ ಸೌದಿ ಅರೇಬಿಯಕ್ಕೆ ಮರಳಿ ಪ್ರವೇಶಿಸುವುದಕ್ಕೆ ಅವಕಾಶವಿಲ್ಲವೆಂದು ಆ ದೇಶದ ಪಾಸ್‌ಪೋರ್ಟ್‌ಗಳ ಮಹಾನಿರ್ದೇಶನಾಲಯ (ಜವಾಝತ್) ಸ್ಪಷ್ಟಪಡಿಸಿದೆ.
ಆದರೆ, ಹಿಂದಿನ ಉದ್ಯೋಗದಾತರ ಬಳಿಗೆ ಹೊಸ ಉದ್ಯೋಗ ವೀಸಾ (ವರ್ಕ್ ವೀಸಾ) ದೊಂದಿಗೆ ವಾಪಸ್ ಆಗಮಿಸಿರುವವವರಿಗೆ ಈ ನಿಬಂಧನೆಗಳು ಅನ್ವಯವಾಗುವುದಿಲ್ಲವೆಂದು ಅದು ತಿಳಿಸಿದೆ.
ವರ್ಷಗಳ ಹಿಂದೆ ನಿರ್ಗಮನ ಹಾಗೂ ಪುನರಾಗಮನ ವೀಸಾದ ಮೂಲಕ ಸೌದಿಯಿಂದ ಹೊರಗೆ ಹೋದವರು ಮತ್ತು ವೀಸಾ ಅವಧಿ ಮುಗಿಯುವ ಮೊದಲು ವಾಪಸ್ ಬಾರದೆ ಇದ್ದ ಹಲವಾರು ಅನಿವಾಸಿಗಳು ಈ ಬಗ್ಗೆ ಮಾಹಿತಿ ಕೋರುತ್ತಿರುವ ಹಿನ್ನೆಲೆಯಲ್ಲಿ ಜವಾಝತ್ ಈ ಸ್ಪಷ್ಟನೆ ನೀಡಿದೆ.