ತಿರುವನಂತಪುರ: ರಾಜ್ಯದಲ್ಲಿ ಇಂದು 3254 ಮಂದಿ ಜನರಿಗೆ ಕೋವಿಡ್ ಸೋಂಕಿರುವುದು ದೃಢಪಟ್ಟಿದೆ. ಕೋಝಿಕೋಡ್ 387, ಕೊಟ್ಟಾಯಂ 363, ಮಲಪ್ಪುರಂ 354, ಎರ್ನಾಕುಳಂ 352, ಕೊಲ್ಲಂ 315, ಪತ್ತನಂತಿಟ್ಟು 266, ಆಲಪ್ಪುಳ 247, ತ್ರಿಶೂರ್ 201, ಕಣ್ಣೂರು 181, ತಿರುವನಂತಪುರ 160, ಕಾಸರಗೋಡು 123, ಇಡುಕ್ಕಿ 118, ವಯನಾಡ್ 99, ಪಾಲಕ್ಕಾಡ್ 88 ಎಂಬಂತೆ ಸೋಂಕು ಕಂಡುಬಂದಿದೆ.
ಕಳೆದ 24 ಗಂಟೆಗಳಲ್ಲಿ ಯುಕೆ ಯಿಂದ ಬಂದ ಯಾರಲ್ಲೂ ಸೋಂಕು ದೃಢೀಕರಿಸಿಲ್ಲ. ಇದರೊಂದಿಗೆ, ಇತ್ತೀಚೆಗೆ ಯುಕೆ ಯಿಂದ ಬಂದ 94 ಜನರಿಗೆ ಕೋವಿಡ್ ದೃಢಪಡಿಸಲಾಗಿದ್ದು, ಈ ಪೈಕಿ 82 ಮಂದಿಗೆ ಋಣಾತ್ಮಕವಾಗಿದೆ. ಒಟ್ಟು 11 ಜನರಿಗೆ ರೂಪಾಂತರಿ ವೈರಸ್ ಇರುವುದು ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 62,769 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ ಶೇ.5.18.ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,14,76,284 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 15 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 4197 ಕ್ಕೆ ಏರಿಕೆಯಾಗಿದೆ. ಇಂದು, ಸೋಂಕು ಪತ್ತೆಯಾದವರಲ್ಲಿ 88 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 2979 ಮಂದಿ ಜನರಿಗೆ ಸೋಂಕು ತಗಲಿತು. 166 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕೋಝಿಕೋಡ್ 379, ಕೊಟ್ಟಾಯಂ 345, ಮಲಪ್ಪುರಂ 346, ಎರ್ನಾಕುಳಂ 335, ಕೊಲ್ಲಂ 305, ಪತ್ತನಂತಿಟ್ಟು 236, ಆಲಪ್ಪುಳ 243, ತ್ರಿಶೂರ್ 193, ಕಣ್ಣೂರು 133, ತಿರುವನಂತಪುರ 110, ಕಾಸರಗೋಡು 100, ಇಡುಕ್ಕಿ 110, ವಯನಾಡ್ 95, ಪಾಲಕ್ಕಾಡ್ 49 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು 21 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿರುವುದು ದೃಢಪಟ್ಟಿದೆ. ಕಣ್ಣೂರು 5, ತಿರುವನಂತಪುರ ಮತ್ತು ಕೋಝಿಕೋಡ್ ತಲಾ 4, ಎರ್ನಾಕುಳಂ, ತ್ರಿಶೂರ್ ಮತ್ತು ಕಾಸರಗೋಡು ತಲಾ 2, ಪತ್ತನಂತಿಟ್ಟು ಮತ್ತು ವಯನಾಡ್ ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೂ ಸೋಂಕು ಬಾಧಿಸಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 4333 ಮಂದಿ ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 314, ಕೊಲ್ಲಂ 293, ಪತ್ತನಂತಿಟ್ಟು 578, ಆಲಪ್ಪುಳ 390, ಕೊಟ್ಟಾಯಂ 269, ಇಡುಕ್ಕಿ 217, ಎರ್ನಾಕುಳಂ 476, ತ್ರಿಶೂರ್ 355, ಪಾಲಕ್ಕಾಡ್ 188, ಮಲಪ್ಪುರಂ 387, ಕೊಝಿಕೋಡ್ 351, ವಯನಾಡ್ 134, ಕಣ್ಣೂರು 232, ಕಾಸರಗೋಡು 149 ಎಂಬಂಖತೆ ನೆಗೆಟಿವ್ ಆಗಿದೆ. ಇದರೊಂದಿಗೆ 49,420 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 10,05,497 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,11,044 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 2,03,729 ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 7,315 ಆಸ್ಪತ್ರೆಗಳಲ್ಲಿದ್ದಾರೆ. ಸುಮಾರು 790 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಹೊಸ ಹಾಟ್‍ಸ್ಪಾಟ್‍ಗಳಿಲ್ಲ. 2 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 367 ಹಾಟ್‍ಸ್ಪಾಟ್‍ಗಳಿವೆ.