HEALTH TIPS

ರಾಜ್ಯದಲ್ಲಿ ಇಂದು 3459 ಮಂದಿಗೆ ಕೋವಿಡ್ ದೃಢ-ಕಾಸರಗೋಡು-41 ಮಂದಿಗೆ ಸೋಂಕು

             ತಿರುವನಂತಪುರ: ರಾಜ್ಯದಲ್ಲಿ ಇಂದು 3459 ಜನರಿಗೆ ಕೋವಿಡ್ ಸೋಂಕು ಖಚಿತವಾಗಿದೆ. ಮಲಪ್ಪುರಂ 516, ಕೋಝಿಕ್ಕೋಡ್ 432, ಎರ್ನಾಕುಳಂ 424, ಕೊಟ್ಟಾಯಂ 302, ತಿರುವನಂತಪುರ 288, ತ್ರಿಶೂರ್ 263, ಆಲಪ್ಪುಳ 256, ಕೊಲ್ಲಂ 253, ಪತ್ತನಂತಿಟ್ಟು 184, ಕಣ್ಣೂರು 157, ಪಾಲಕ್ಕಾಡ್ 145,ಇಡುಕ್ಕಿ 114, ವಯನಾಡ್ 84, ಕಾಸರಗೋಡು 41 ಎಂಬಂತೆ ಸೋಂಕು ದೃಢಪಡಿಸಲಾಗಿದೆ. 

            ಕಳೆದ 24 ಗಂಟೆಗಳಲ್ಲಿ ಯುಕೆ ಯಿಂದ ಬಂದ ಯಾರಿಗೂ ದೃಢೀಕರಿಸಿಲ್ಲ. ಇತ್ತೀಚೆಗೆ ಯುಕೆಯಿಂದ ಆಗಮಿಸಿದ 77 ಜನರಿಗೆ ಕೋವಿಡ್ ಈವರೆಗೆ ಖಚಿತಪಡಿಸಲಾಗಿದೆ. ಈ ಪೈಕಿ 57 ಮಂದಿಗೆ ನೆಗೆಟಿವ್ ಆಗಿದೆ. ಒಟ್ಟು 10 ಜನರಿಗೆ ರೂಪಾಂತರಿ ವೈರಸ್ ಇರುವುದು ಪತ್ತೆಯಾಗಿದೆ.

           ಕಳೆದ 24 ಗಂಟೆಗಳಲ್ಲಿ 33,579 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರವು ಶೇ.10.30 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ.ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 96,59,492 ಮಾದರಿಗಳನ್ನು ಈವರೆಗೆ ಪರೀಕ್ಷೆಗೆ ಕಳುಹಿಸಲಾಗಿದೆ.

              ಕಳೆದ 24 ಗಂಟೆಗಳಲ್ಲಿ  17 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿರುವುದಾಗಿ ಖಚಿತಪಡಿಸಲಾಗಿದೆ. ಒಟ್ಟು ಸಾವಿನ ಸಂಖ್ಯೆ 3760 ಕ್ಕೆ ಏರಿಕೆಯಾಗಿದೆ. 

          ಇಂದು, ಸೋಂಕು ಪತ್ತೆಯಾದವರಲ್ಲಿ 47 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 3136 ಮಂದಿ ಜನರಿಗೆ ಸೋಂಕು ತಗುಲಿತು. 247 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 504, ಕೋಝಿಕ್ಕೋಡ್  412, ಎರ್ನಾಕುಳಂ 410, ಕೊಟ್ಟಾಯಂ 279, ತಿರುವನಂತಪುರ 202, ತ್ರಿಶೂರ್ 255, ಆಲಪ್ಪುಳ 248, ಕೊಲ್ಲಂ 247, ಪತ್ತನಂತಿಟ್ಟು 158, ಕಣ್ಣೂರು 134, ಪಾಲಕ್ಕಾಡ್ 64, ಇಡಕ್ಕಿ 109, ವಯನಾಡ್ 82, ಕಾಸರಗೋಡುಬ 32 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.

    ಇಂದು 29 ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಕಣ್ಣೂರು 9, ಕೋಝಿಕ್ಕೋಡ್ 5, ತ್ರಿಶೂರ್ 4, ತಿರುವನಂತಪುರ 3, ಕೊಲ್ಲಂ, ವಯನಾಡ್ 2, ಪತ್ತನಂತಿಟ್ಟು, ಕೊಟ್ಟಾಯಂ, ಎರ್ನಾಕುಳಂ ಮತ್ತು ಪಾಲಕ್ಕಾಡ್ ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಡಿಸಲಾಗಿದೆ. 

            ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 5215 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 255, ಕೊಲ್ಲಂ 332, ಪತ್ತನಂತಿಟ್ಟು 266, ಆಲಪ್ಪುಳ 493, ಕೊಟ್ಟಾಯಂ 681, ಇಡಕ್ಕಿ 193, ಎರ್ನಾಕುಳಂ 908, ತ್ರಿಶೂರ್ 523, ಪಾಲಕ್ಕಾಡ್ 273, ಮಲಪ್ಪುರಂ 517, ಕೋಝಿಕ್ಕೋಡ್  390, ವಯನಾಡ್ 126, ಕಣ್ಣೂರು 181, ಕಾಸರಗೋಡು 77 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 69,207 ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 8,59,421 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

              ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,18,909 ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 2,07,791 ಮನೆ / ಸಾಂಸ್ಥಿಕ ಸಂಪರ್ಕತಡ್ನೆ ಮತ್ತು 11,118 ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 1205 ಮಂದಿ ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

             ಇಂದು 4 ಹೊಸ ಹಾಟ್‍ಸ್ಪಾಟ್‍ಗಳಿವೆ. ಹೊಸ ಹಾಟ್‍ಸ್ಪಾಟ್‍ಗಳೆಂದರೆ ತಿರುವನಂತಪುರ ಕಾಪೆರ್Çರೇಷನ್ (ಕಂಟೈನ್‍ಮೆಂಟ್ ಸಬ್ ವಾರ್ಡ್ 13), ಅಜೂರ್ (ಸಬ್ ವಾರ್ಡ್ 11), ತ್ರಿಶೂರ್ ಜಿಲ್ಲೆಯ ಮಾಲಾ (ಸಬ್ ವಾರ್ಡ್ 1) ಮತ್ತು ಪಾಲಕ್ಕಾಡ್ ಜಿಲ್ಲೆಯ ವಡಕ್ಕಾಂಚೇರಿ (5, 8, 9). ಜೊತೆಗೆ ಇಂದು 3 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 376 ಹಾಟ್‍ಸ್ಪಾಟ್‍ಗಳಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries